Home ಟಾಪ್ ಸುದ್ದಿಗಳು ಚಂದ್ರಬಾಬು ನಾಯ್ಡು ಬೆಂಬಲಿಸಲು NDA ತೊರೆದ ಪವನ್ ಕಲ್ಯಾಣ್

ಚಂದ್ರಬಾಬು ನಾಯ್ಡು ಬೆಂಬಲಿಸಲು NDA ತೊರೆದ ಪವನ್ ಕಲ್ಯಾಣ್

ಪೆಡನಾ: ಟಿಡಿಪಿಯನ್ನು ಬೆಂಬಲಿಸಲು ಬಿಜೆಪಿ ನೇತೃತ್ವದ ಎನ್ ಡಿಎಯಿಂದ ಹೊರಬಂದಿರುವುದಾಗಿ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಗುರುವಾರ ಹೇಳಿದ್ದಾರೆ.


ಕೃಷ್ಣಾ ಜಿಲ್ಲೆಯ ಪೆಡನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಟಿಡಿಪಿ ಬಲಿಷ್ಠ ಪಕ್ಷವಾಗಿದ್ದು, ಆಂಧ್ರಪ್ರದೇಶದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿಗಾಗಿ ತೆಲುಗು ದೇಶಂ ಪಕ್ಷದ ಅಗತ್ಯವಿದೆ. ಇಂದು ಟಿಡಿಪಿ ಹೋರಾಟದಲ್ಲಿದ್ದು, ನಾವು ಅವರನ್ನು ಬೆಂಬಲಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಟಿಡಿಪಿಗೆ ಜನಸೇನಾ ಯುವ ರಕ್ತದ ಬೆಂಬಲ ಬೇಕು. ಟಿಡಿಪಿ ಮತ್ತು ಜನಸೇನೆ ಕೈಜೋಡಿಸಿದರೆ ರಾಜ್ಯದಲ್ಲಿ ವೈಎಸ್ ಆರ್ ಸಿಪಿ ಮುಳುಗಲಿದೆ ಎಂದರು.

Join Whatsapp
Exit mobile version