ಮೂರೇ ದಿನಗಳಲ್ಲಿ 313 ಕೋಟಿ ರೂ.ಗಳಿಸಿದ ಪಠಾಣ್

Prasthutha|

ನವದೆಹಲಿ: ಸಂಘಪರಿವಾರದ ವಿರೋಧದ ನಡುವೆಯೂ ಪಠಾಣ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೂರೇ ದಿನಗಳಲ್ಲಿ 313 ಕೋಟಿ ರೂ.ಗಳಿಸಿ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟನೆಯ ಪಠಾಣ್ ವಿರುದ್ಧ ಸಂಘಪರಿವಾರ ಸಂಘಟನೆಗಳು ಪ್ರತಿಭಟನೆ ನಡೆಸಿ ಚಿತ್ರ ಬಹಿಷ್ಕಾರಕ್ಕೆ ಕರೆ ನೀಡಿದ್ದವು. ಆದರೆ ಇದಕ್ಕೆ ಕ್ಯಾರೇ ಎನ್ನದ ಚಿತ್ರ ಪ್ರೇಮಿಗಳು ಪಠಾಣ್ ಚಿತ್ರಕ್ಕೆ ಬೇಷ್ ಎಂದಿದ್ದಾರೆ.

- Advertisement -

ಜನವರಿ 25ರಂದು ತೆರೆ ಕಂಡ ಈ ಚಿತ್ರ ಮೂರನೇ ದಿನ ಹಿಂದಿಯಲ್ಲಿ 38 ಕೋಟಿ ನಿವ್ವಳ ಗಳಿಕೆ ಕಂಡಿದೆ. ಇತರ ಭಾಷೆಗಳಲ್ಲಿ 1.25 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಮ್ಸ್ ತಿಳಿಸಿದೆ.

ಭಾರತದಲ್ಲಿ ಸತತ ಮೂರನೇ ದಿನ 39.25 ನಿವ್ವಳ ಗಳಿಕೆ ಕಂಡಿದೆ. ಒಟ್ಟಾರೆ 47 ಕೋಟಿ ರೂ. ಸಂಗ್ರಹವಾಗಿದೆ. ವಿದೇಶಗಳಲ್ಲಿ ಒಟ್ಟು 43 ಕೋಟಿ ರೂ.ಗಳಿಸಿದೆ. ಒಟ್ಟಾರೆ ಮೂರು ದಿನಗಳಲ್ಲಿ ಜಾಗತಿಕವಾಗಿ 90 ಕೋಟಿ ದಾಟಿದೆ ಎಂದು ಸಂಸ್ಥೆ ತಿಳಿಸಿದೆ.

- Advertisement -