Home ಟಾಪ್ ಸುದ್ದಿಗಳು 14 ಉತ್ಪನ್ನಗಳ ಮಾರಾಟ ನಿಲ್ಲಿಸಿದ ಪತಂಜಲಿ

14 ಉತ್ಪನ್ನಗಳ ಮಾರಾಟ ನಿಲ್ಲಿಸಿದ ಪತಂಜಲಿ

ನವದೆಹಲಿ: ಉತ್ತರಾಖಂಡ್‌ನಲ್ಲಿ ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ತನ್ನ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಸುಪ್ರೀಕೋರ್ಟ್‌ಗೆ ತಿಳಿಸಿದೆ. ಈ ಉತ್ಪನ್ನಗಳನ್ನು ಹಿಂದೆಗೆದುಕೊಳ್ಳುವಂತೆ 5,606 ಫ್ರ್ಯಾಂಚೈಸ್ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಅದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ದಿವ್ಯಾ ಫಾರ್ಮಸಿ ತಯಾರಿಸಿದ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನ ಏಪ್ರಿಲ್ 30ರಂದು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಪರವಾನಗಿ ರದ್ದುಪಡಿಸಿದ ಉತ್ಪನ್ನಗಳ ಪಟ್ಟಿ ಇಲ್ಲಿದೆ
Swasari Gold
Swasari Vati
Bronchom
Swasari Pravahi
Swasari Avaleh
MuktaVati Extra Power
Lipidom
Bp Grit
Madhugrit
MadhunashiniVati Extra Power
Livamrit Advance
Livogrit
Eyegrit Gold
Patanjali Drishti Eye Drop

ಕೋವಿಡ್ ವ್ಯಾಕ್ಸಿನೇಷನ್ ಪ್ರಯತ್ನ ಮತ್ತು ಸಮಕಾಲೀನ ವೈದ್ಯಕೀಯ ಅಭ್ಯಾಸಗಳ ವಿರುದ್ಧ ಪತಂಜಲಿ ನಕಾರಾತ್ಮಕ ಅಭಿಯಾನವನ್ನ ನಡೆಸಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (IMA) ಸಲ್ಲಿಸಿದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

Join Whatsapp
Exit mobile version