WWE, AEW ಸ್ಟಾರ್ ‘ಬ್ರಾಡಿ ಲೀ’ ಜಾನ್ ಹ್ಯೂಬರ್ ಇನ್ನಿಲ್ಲ

Prasthutha|

ನವದೆಹಲಿ : ಎಇಡಬ್ಲ್ಯೂನಲ್ಲಿ ಅಭಿಮಾನಿಗಳಿಂದ ಬ್ರಾಡೀ ಲೀ ಎಂದೂ ಡಬ್ಲ್ಯೂಡಬ್ಲ್ಯೂಇಯಲ್ಲಿ ಲ್ಯೂಕ್ ಹಾರ್ಪರ್ ಎಂದೇ ಜನಪ್ರಿಯರಾಗಿದ್ದ ಖ್ಯಾತ ಕುಸ್ತಿಪಟು ಜಾನ್ ಹ್ಯೂಬರ್ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ಅಮಾಂಡಾ ಸಾಮಾಜಿಕ ಜಾಲತಾಣ ಖಾತೆಯೊಂದರಲ್ಲಿ ದೃಢಪಡಿಸಿದ್ದಾರೆ.

- Advertisement -

ಹ್ಯೂಬರ್ ಗೆ 41 ವಯಸ್ಸಾಗಿತ್ತು. ಶ್ವಾಸಕೋಸ ಸಂಬಂಧಿತ ಸಮಸ್ಯೆಯಿಂದಾಗಿ ಅವರು ಮೃತಪಟ್ಟಿದ್ದಾರೆ. ಕೋವಿಡ್ 19ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಮಾಂಡಾ ಸ್ಪಷ್ಟಪಡಿಸಿದ್ದಾರೆ.

ಹ್ಯೂಬರ್ ಡಬ್ಲ್ಯೂಡಬ್ಲ್ಯೂಇನಲ್ಲಿ ಲ್ಯೂಕ್ ಹಾರ್ಪರ್ ಹೆಸರಲ್ಲಿ ಮತ್ತು ಎಇಡಬ್ಲ್ಯೂಇನಲ್ಲಿ ಬ್ರಾಡೀ ಲೀ ಎಂಬ ಹೆಸರಲ್ಲಿ ಜನಪ್ರಿಯರಾಗಿದ್ದರು. ಎಂಟು ವರ್ಷಗಳಿಂದ ಡಬ್ಲ್ಯೂಡಬ್ಲ್ಯೂಇನಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಹ್ಯೂಬರ್ ಮಾರ್ಚ್ ನಲ್ಲಿ ಎಇಡಬ್ಲ್ಯೂಗೆ ಪಾದಾರ್ಪಣೆ ಮಾಡಿದ್ದರು.

- Advertisement -

ಹ್ಯೂಬರ್ ಅವರು ಯಶಸ್ಸಿನ ತುತ್ತತುದಿಯಲ್ಲಿದ್ದರು. ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ತಮ್ಮ ಪತ್ನಿ, ಇಬ್ಬರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಪತ್ನಿ ಹಾಗೂ ಇಬ್ಬರು ಮಕ್ಕಳಾದ ಬ್ರೋಡಿ ಹಾಗೂ ನೊಲನ್ ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಹ್ಯೂಬರ್ ಬಿಟ್ಟು ಅಗಲಿದ್ದಾರೆ.   

Join Whatsapp