Home ಕರಾವಳಿ ಕಡಬ: KSRTC ಬಸ್’ಗೆ ತಿವಿದ ಕಾಡಾನೆ; ಪ್ರಯಾಣಿಕರು ಜಸ್ಟ್ ಮಿಸ್!

ಕಡಬ: KSRTC ಬಸ್’ಗೆ ತಿವಿದ ಕಾಡಾನೆ; ಪ್ರಯಾಣಿಕರು ಜಸ್ಟ್ ಮಿಸ್!

ಸುಬ್ರಹ್ಮಣ್ಯ: ಕೆಎಸ್ ಆರ್ ಟಿಸಿ ಸ್ಲೀಪರ್ ಕೋಚ್ ಬಸ್ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆ೦ಜಾಳ ಸಮೀಪದ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.


ಸ್ಲೀಪರ್ ಕೋಚ್ ಬಸ್ ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆ೦ಗಳೂರಿಗೆ ತೆರಳುತ್ತಿದ್ದಾಗ ಕೆ೦ಜಾಳ ಸಮೀಪದ ಅನಿಲ ಎಂಬ ರಸ್ತೆಯಲ್ಲಿ ಕಾಡಾನೆ ನಿಂತಿದ್ದು, ಇದನ್ನು ನೋಡಿ ಕ೦ಡು ತಪ್ಪಿಸಲು ಯತ್ನಿಸಿದ್ದಾರೆ.


ಈ ವೇಳೆ ಆನೆಯು ಬಸ್ಸಿನ ಎಡಭಾಗಕ್ಕೆ ದ೦ತದಿ೦ದ ಸೊಂಡಿಲಿನಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರುಅಪಾಯದಿಂದ ಪಾರಾಗಿದ್ದು, ಬಸ್ಸಿಗೆ ಹಾನಿಯಾಗಿದೆ.
ಸ್ವಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version