Home ಟಾಪ್ ಸುದ್ದಿಗಳು ಚಲಿಸುತ್ತಿದ್ದ ಬಿಎಂಟಿಸಿ ಬಸ್ ಗೆ ಬೆಂಕಿ: ಪ್ರಯಾಣಿಕರು ಪಾರು

ಚಲಿಸುತ್ತಿದ್ದ ಬಿಎಂಟಿಸಿ ಬಸ್ ಗೆ ಬೆಂಕಿ: ಪ್ರಯಾಣಿಕರು ಪಾರು

ಬೆಂಗಳೂರು: ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಚಲಿಸುತ್ತಿದ್ದ  ಬಿಎಂಟಿಸಿ ಬಸ್ ನಲ್ಲಿ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು ಚಾಲಕನ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಕ್ಕಳ ಕೂಟದಿಂದ ಬಸ್ ಚಲಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು  ಬಸ್ನ ಲ್ಲಿ 40 ಪ್ರಯಾಣಿಕರಿದ್ದರು, ಯಾವುದೇ ಸಾವು ನೋವು ಸಂಭವಿಸಿಲ್ಲ.

ಬೇರೆ ಬಸ್ಗೆ ಶಿಫ್ಟ್ ಮಾಡಿ ಪ್ರಯಾಣಿಕರನ್ನು ಕಳಿಸಲಾಗಿದೆ. ಕೆ ಆರ್ ಮಾರ್ಕೆಟ್ಗೆ ಹೊರಟಿದ್ದ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ.

ಕಂಡಕ್ಟರ್ ಬಾಕ್ಸ್ ನಲ್ಲಿ ಇಡಲಾಗಿದ್ದ ಬಸ್ ಟಿಕೆಟ್ ಸುಟ್ಟು ಭಸ್ಮವಾಗಿವೆ. ಪೊಲೀಸರು ರಸ್ತೆ ಬಂದ್ ಮಾಡಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.

  ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Join Whatsapp
Exit mobile version