Home ಟಾಪ್ ಸುದ್ದಿಗಳು ಒಡಿಶಾ ರೈಲು ದುರಂತ: ಅಪಘಾತದ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭ

ಒಡಿಶಾ ರೈಲು ದುರಂತ: ಅಪಘಾತದ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭ

ಬಾಲಸೋರ್: ಒಡಿಶಾದ ಬಾಲಸೋರ್ ನಲ್ಲಿ ತ್ರಿವಳಿ ರೈಲು ಅಪಘಾತದಿಂದ ಹಾನಿಗೊಳಗಾಗಿದ್ದ ಹಳಿಯನ್ನು ದುರಸ್ಥಿ ಮಾಡಲಾಗಿದ್ದು, ಪ್ಯಾಸೆಂಜರ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ.


ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಶ್ರಮದಿಂದ ಹಾನಿಗೊಳಗಾಗಿದ್ದ ಮಾರ್ಗವನ್ನು ಬೇಗ ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮೂಲಕ ತಿಳಿಸಿದ್ದರು.


ಅದರಂತೆ, ಬೆಂಗಳೂರು –ಹೌರಾ ರೈಲು ಅಪಘಾತಕ್ಕೀಡಾದ ಮಾರ್ಗದಲ್ಲಿ ಭಾನುವಾರ ರಾತ್ರಿ 10.40ಗಂಟೆಗೆ ವಿಶಾಖಪಟ್ಟಣದ ಬಂದರಿನಿಂದ ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲು ರೂರ್ಕೆಲಾ ಸ್ಟೀಲ್ ಪ್ಲಾಂಟ್ ನತ್ತ ಸಂಚರಿಸಿತ್ತು.


ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಬಳಿಕ ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲು ಇದಾಗಿತ್ತು. ಇಂದು ಬೆಳಿಗ್ಗೆ ಪ್ಯಾಸೆಂಜರ್ ರೈಲು ಸಹ ಸಂಚರಿಸಿದೆ.

Join Whatsapp
Exit mobile version