ಬೆಂಗಳೂರು: ಇಂದು ವಿಧಾನಸಭೆಯಲ್ಲಿ ಕೇಂದ್ರದ ಅನುದಾನ ತಾರತಮ್ಯ ಖಂಡಿಸುವ ಹಾಗೂ ಅನುದಾನದ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯವನ್ನು ಮಂಡಿಸಿ, ರಾಜ್ಯ ಸರ್ಕಾರ ಅಂಗೀಕಾರ ಪಡೆದಿದೆ.
ಈ ನಿರ್ಣಯ ಮಂಡಿಸಿ ಮಾತನಾಡಿದಂತ ಸಚಿವ ಹೆಚ್ ಕೆ ಪಾಟೀಲ್, ಕೇಂದ್ರದಿಂದ ರಾಜ್ಯಕ್ಕೆ 68,200 ಕೋಟಿ ರೂ ತೆರಿಗೆ ನಷ್ಟವಾಗಿದೆ ಎಂಬುದಾಗಿ ಅಂಕಿ ಅಂಶಗಳ ಸಹಿತ ವಿವರಿಸಿದರು.
ಅನುದಾನ, ತೆರಿಗೆ ಪಾಲು, ಬರದ ಬಗ್ಗೆ ವಿವರಿಸಿದ ಅವರು, ಅನುದಾನದ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯವನ್ನು ಮಂಡಿಸಿ ಅಂಗೀಕಾರವನ್ನು ಪಡೆದುಕೊಂಡರು.
ಅನುದಾನ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯವನ್ನು ಮಂಡಿಸಿದಾಗ, ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ, ಘೋಷಣೆ ಕೂಗಲಾಯಿತು. ಇದರ ನಡುವೆ ನಿರ್ಣಯವನ್ನು ಮಂಡಿಸಿ, ಅಂಗೀಕಾರ ಪಡೆಯಲಾಯಿತು.