Home ಟಾಪ್ ಸುದ್ದಿಗಳು ಬ್ರಿಟಿಷರ ಕಾಲದಲ್ಲೂ ಕೃಷಿ ಕಾನೂನು ಹಿಂಪಡೆಯಲಾಗಿತ್ತು : ಗುಲಾಂ ನಬಿ ಆಝಾದ್

ಬ್ರಿಟಿಷರ ಕಾಲದಲ್ಲೂ ಕೃಷಿ ಕಾನೂನು ಹಿಂಪಡೆಯಲಾಗಿತ್ತು : ಗುಲಾಂ ನಬಿ ಆಝಾದ್

ನವದೆಹಲಿ : ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ಒತ್ತಾಯಿಸಿದ್ದಾರೆ. ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಉಲ್ಲೇಖಿಸಿ ಅವರು ಮಾತನಾಡುತ್ತಿದ್ದರು.

“ತಮ್ಮ ಆಡಳಿತದಲ್ಲಿ ಬ್ರಿಟಿಷರು ಕೂಡ ಒಂದು ಬಾರಿ ಕೃಷಿ ಕಾನೂನನ್ನು ಹಿಂಪಡೆದಿದ್ದರು” ಎಂದು ಗುಲಾಂ ನಬಿ ಆಝಾರ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ 15 ಗಂಟೆಗಳ ಅವಧಿಗೆ ರೈತರ ಪ್ರತಿಭಟನೆ ಬಗ್ಗೆ ಮಾತನಾಡಲು ಅವಕಾಶ ನೀಡಲಾಗಿದೆ. ಎರಡು ದಿನಗಳ ಪ್ರಶ್ನಾವಧಿಯನ್ನು ಅಮಾನತುಗೊಳಿಸಲಾಗಿದೆ.

ಜ.26ರಿಂದ ಕಾಣೆಯಾಗಿರುವವರ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸುವಂತೆಯೂ ಆಝಾದ್ ಒತ್ತಾಯಿಸಿದ್ದಾರೆ.

Join Whatsapp
Exit mobile version