Home ರಾಜ್ಯ ಎಲ್ಲ ಜಮೀನು ಕೊಟ್ಟರೂ ಕೆಲಸ ನೀಡದ ಪಾರ್ಲೆ ಕಂಪನಿ: ಯುವಕ ಸಾವಿಗೆ ಶರಣು

ಎಲ್ಲ ಜಮೀನು ಕೊಟ್ಟರೂ ಕೆಲಸ ನೀಡದ ಪಾರ್ಲೆ ಕಂಪನಿ: ಯುವಕ ಸಾವಿಗೆ ಶರಣು

ನಂಜನಗೂಡು: ಕೈಗಾರಿಕೆಗಾಗಿ ಕೃಷಿ ಜಮೀನು ಕಳಕೊಂಡು, ಅಲ್ಲಿ ಸ್ಥಾಪನೆಯಾಗಿರುವ ಕಾರ್ಖಾನೆಯಲ್ಲಿ ಉದ್ಯೋಗವೂ ಸಿಗದೆ ಮನನೊಂದು ಅಡಕನಹಳ್ಳಿ ಗ್ರಾಮದ ರೈತ ಸಿದ್ದರಾಜು (35)ನೇಣಿಗೆ ಶರಣಾಗಿದ್ದಾರೆ.

ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಿದ್ದರಾಜು ಹಾಗೂ ಅವರ ಸಹೋದರರಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಒಟ್ಟು 6 ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡು ಕೈಗಾರಿಕೆ ಸ್ಥಾಪನೆಗಾಗಿ ಪಾರ್ಲೆ ಆಗ್ರೋ ಇಂಡಸ್ಟ್ರೀಸ್ ಕಂಪನಿಗೆ ನೀಡಿತ್ತು. ಆದರೆ ಕೆಐಎಡಿಬಿ ನಿಯಮದ ಪ್ರಕಾರವಾಗಿ ಭೂಮಿ ಕಳೆದುಕೊಂಡ ಸಿದ್ದರಾಜುಗೆ ಉದ್ಯೋಗ ನೀಡಬೇಕಿತ್ತು. ನಾಲ್ಕು ವರ್ಷದಿಂದ ಉದ್ಯೋಗಕ್ಕಾಗಿ ಕೆಐಎಡಿಬಿ ಕಚೇರಿ ಹಾಗೂ ಪಾರ್ಲೆ ಕಂಪನಿಯ ಮುಂದೆ ಅವರು ಅಲೆದರೂ ಉದ್ಯೋಗ ಸಿಗಲಿಲ್ಲ. ಬದಲಾಗಿ ನ್ಯಾಯ ಕೇಳಿದ ಅವರ ಹಾಗೂ ಅವರ ಕುಟುಂಬದವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೇ ಡೆತ್ ನೋಟಲ್ಲಿ ಬರೆದ ಸಿದ್ದರಾಜು, ನಮಗೆ ಆರ್ಥಿಕವಾಗಿ ಬೇರೆ ಯಾವುದೇ ಆದಾಯ ಇಲ್ಲ. ಜಮೀನು ಕಳೆದುಕೊಂಡು ಸಾಲಗಾರನಾಗಿದ್ದೇನೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

ಸಿದ್ದರಾಜುಗೆ ಇಬ್ಬರು ಪುಟ್ಟ ಮಕ್ಕಳು ಇದ್ದು, ಪತ್ನಿ ರಕ್ಷಿತಾ ನಂಜನಗೂಡು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿಭಟನೆ:

Join Whatsapp
Exit mobile version