ಪಾರ್ಸಲ್ ವಿಳಂಬ: ರೆಸ್ಟೋರೆಂಟ್ ಮಾಲೀಕನಿಗೆ ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್!

Prasthutha|

ದೆಹಲಿ: ಇಲ್ಲಿನ ಸ್ವಿಗ್ಗಿ ಫುಡ್ ಡೆಲಿವರಿ ಏಜೆಂಟ್ ಒಬ್ಬ ಪಾರ್ಸಲ್ ನೀಡುವುದು ತಡವಾಯಿತು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಗುಂಡು ಹಾರಿಸಿ, ಹತ್ಯೆ ಮಾಡಿರುವುದು ವರದಿಯಾಗಿದೆ.

ಮಿತ್ರ ಎಂಬ ಸ್ವಂತ ರೆಸ್ಟೋರೆಂಟ್ ಹೊಂದಿದ್ದ ಸುನಿಲ್ ಅಗರ್​ ವಾಲ್ ಮಂಗಳವಾರ ರಾತ್ರಿ ಸ್ವಿಗ್ಗಿ ಡೆಲಿವರಿ ಬಾಯ್​ ನಿಂದ ಕೊಲೆಯಾಗಿದ್ದಾರೆ. ಮಿತ್ರ ರೆಸ್ಟೋರೆಂಟ್ ​ಗೆ ಸ್ವಿಗ್ಗಿಯಿಂದ ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿ ಆರ್ಡರ್ ಬಂದಿತ್ತು. ಆ ಆರ್ಡರ್ ಅನ್ನು ತೆಗೆದುಕೊಂಡು ಹೋಗಲು ಮಂಗಳವಾರ ರಾತ್ರಿ ಡೆಲಿವರಿ ಬಾಯ್ ಬಂದಿದ್ದ. ಆತ ಬರುವ ವೇಳೆಗೆ ಬಿರಿಯಾನಿ ರೆಡಿಯಾಗಿತ್ತು. ಆದರೆ, ಪೂರಿ, ಸಬ್ಜಿ ಪಾರ್ಸಲ್ ರೆಡಿ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೋಟೆಲ್ ​ನವರು ಹೇಳಿದ್ದರು. ಇದೇ ವಿಷಯಕ್ಕೆ ಡೆಲಿವರಿ ಬಾಯ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳವಾಗಿತ್ತು.

- Advertisement -

ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಮನಬಂದಂತೆ ಬೈದಿದ್ದ. ಇದರಿಂದ ಕೋಪಗೊಂಡ ಆ ಸಿಬ್ಬಂದಿ ರೆಸ್ಟೋರೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದ. ಜಗಳ ನಿಲ್ಲಿಸಲು ಅಲ್ಲಿಗೆ ಬಂದ ಸುನಿಲ್ ಹಣೆಗೆ ಈ ವೇಳೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಗುಂಡು ಹಾರಿಸಿದ್ದಾನೆ. ತಕ್ಷಣ ರೆಸ್ಟೋರೆಂಟ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಡೆಲಿವರಿ ಬಾಯ್ ನಾಪತ್ತೆಯಾಗಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

- Advertisement -