ತುಮಕೂರು: ಕೊರಟಗೆರೆ ಪಟ್ಟಣದಲ್ಲಿ ಇರುವ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗಿಯಾದರು.
ಮುಸ್ಲಿಂ ಮುಖಂಡರೊಂದಿಗೆ ಪರಮೇಶ್ವರ್ ಪ್ರಾರ್ಥನೆ ಮಾಡಿದರು. ಕಪ್ಪು ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾದ ಪರಮೇಶ್ವರ್, ಅವರೊಂದಿಗೆ ನೂರಾರು ಮುಸ್ಲಿಂ ಭಾಂದವರು ಹಾಜರಿದ್ದರು.
ಈದ್ಗಾ ಮೈದಾನದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪ್ರಪ್ರಥಮವಾಗಿ ಅಲ್ಲಾಗೆ ನಾನು ನಮನ ಸಲ್ಲಿಸ್ತಿನಿ. ಇಡೀ ವಿಶ್ವಕ್ಕೆ ಸಂದೇಶ ಕೊಡುವ ಬಕ್ರೀದ್ ಹಬ್ಬ ಇದು. ನಾನು ಎಲ್ಲರಿಗೂ ನಮನಗಳನ್ನ ಹೇಳ್ತಿನಿ ಎಂದರು.