ಭಾರತೀಯ ಪರಾಗ್ ಅಗರ್’ವಾಲ್ ಟ್ವಿಟರ್’ನ ನೂತನ CEO

Prasthutha|

ಫ್ಲೋರಿಡಾ: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ CEO ಹುದ್ದೆಗೆ ಜಾಕ್ ಡಾರ್ಸಿ ರಾಜೀನಾಮೆ ನೀಡಿದ್ದಾರೆ. ಜಾಕ್ ಡಾರ್ಸಿ ಸ್ಥಾನಕ್ಕೆ ಭಾರತೀಯ ಪರಾಗ್ ಅಗರ್’ವಾಲ್ ಅವರು ನೇಮಕವಾಗಿದ್ದಾರೆ. ಪರಾಗ್ ಸದ್ಯ ಟ್ವಿಟರ್’ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದು  ಬಾಂಬೆ ಐಐಟಿಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

- Advertisement -

ಟ್ವಿಟರ್’ನ CEO ಹುದ್ದೆ ತೊರೆಯುತ್ತಿರುವುದರ ಬಗ್ಗೆ ಸ್ವತಃ ಜಾಕ್ ಡಾರ್ಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

“ಸ್ನೇಹಿತರೇ.. ಸಹ ಸಂಸ್ಥಾಪಕನ ಹುದ್ದೆಯಿಂದ .. ಸಿಇಒವರೆಗಿನ ಹೆಚ್ಚುಕಮ್ಮಿ 16 ವರ್ಷಗಳ ಪಯಣವನ್ನು ಮುಗಿಸುವ ಸಮಯ ಬಂದಿದೆ. ಇದು ಹೊರಡುವ ಸಮಯ ಯಾಕೆಂದರೆ…” ಹೀಗೆ ಆರಂಭವಾಗುವ ಪತ್ರದಲ್ಲಿ ಟ್ವಿಟ್ಟರ್ ಸಂಸ್ಥೆಯಲ್ಲಿನ ತಮ್ಮ 16 ವರ್ಷಗಳ ಅನುಭವವನ್ನು ಜಾಕ್ ಡಾರ್ಸಿ ಹಂಚಿಕೊಂಡಿದ್ದಾರೆ.

- Advertisement -

ತಮ್ಮ ಸ್ಥಾನಕ್ಕೆ ಪರಾಗ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ವಿಷಯವನ್ನು ಪತ್ರದಲ್ಲಿ ತಿಳಿಸಲಾಗಿದೆ.

ಅಮೆರಿಕ ಮೂಲದ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಸಿಇಒ ಜಾಕ್ ಡಾಸಿ ಅವರ ಮೊಟ್ಟ ಮೊದಲ ಟ್ವೀಟ್’ನ ಡಿಜಿಟಲ್ ಆವೃತ್ತಿಯನ್ನು (NFT) ಕಳೆದ ಮಾರ್ಚ್’ನಲ್ಲಿ 2.9 ಮಿಲಿಯನ್ ಡಾಲರ್’ಗೆ (20 ಕೋಟಿ ರುಪಾಯಿ) ಮಾರಾಟ ಮಾಡಿದ್ದರು. ಮಾರ್ಚ್ 2006ರಲ್ಲಿ JUST SETTING UP MY TWTTR ಎಂದು ಜಾಕ್ ಡಾರ್ಸಿ ಮಾಡಿದ್ದ ಟ್ವೀಟ್’ಅನ್ನು ಬ್ರಿಡ್ಜ್ ಒರಾಕಲ್ CEO ಸಿನಾ ಎಸ್ಟಾವಿ ಹರಾಜಿನ ಮೂಲಕ ಖರೀದಿಸಿದ್ದರು.

Join Whatsapp