Home ಟಾಪ್ ಸುದ್ದಿಗಳು ಸಜೀಪನಡು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆಯನ್ನು ಸನ್ಮಾನಿಸಿದ ಪಂಚಾಯತ್ ಸಿಬ್ಬಂದಿ

ಸಜೀಪನಡು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆಯನ್ನು ಸನ್ಮಾನಿಸಿದ ಪಂಚಾಯತ್ ಸಿಬ್ಬಂದಿ

ಬಂಟ್ವಾಳ: ಸಜೀಪನಡು ಗ್ರಾಮ ಪಂಚಾಯತ್‌ನಲ್ಲಿ ಶನಿವಾರದಂದು ನಡೆದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಮಾಜಿ ಅದ್ಯಕ್ಷೆಯಾಗಿದ್ದ ಫೌಝಿಯಾ ಬಾನು ರವರಿಗೆ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಫೌಝಿಯಾ ಬಾನು ಅವರು 2021-2023 ಸಾಲಿನ ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನೇತೃತ್ವ ನೀಡಿ ಗ್ರಾಮಕ್ಕೆ ಪ್ರತಿಷ್ಠಿತ ಗಾಂಧಿ ಪುರಸ್ಕಾರ ಪಡೆಯುವಲ್ಲಿ ಸಫಲರಾಗಿದ್ದರು.

ಸನ್ಮಾನ ಸ್ವೀಕರಿಸಿದ ಮಾಜಿ ಅಧ್ಯಕ್ಷರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷೆ ಯವರಿಗೆ ಅಭಿನಂದನೆ ಸಲ್ಲಿಸಿದರು.
ತನ್ನ ಎರಡೂವರೆ ವರ್ಷದ ಆಡಳಿತಾವಧಿಯಲ್ಲಿ ಗ್ರಾಮದ ಸೇವೆ ಮಾಡಲು ತನ್ನೊಂದಿಗೆ ಸಹಕರಿಸಿದ ಸಿಬ್ಬಂದಿವರ್ಗದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, “ಒಂದು ಗ್ರಾಮದ ಅಭಿವೃದ್ಧಿಯು ಗ್ರಾಮ ಪಂಚಾಯತಿನ ಸಿಬ್ಬಂದಿಯ ಇಚ್ಛಾಶಕ್ತಿಯ ಮೇಲೆ ಅವಲಂಬಿತವಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ SN ಇಕ್ಬಾಲ್, ಉಪಾಧ್ಯಕ್ಷೆ ಸಬಿತಾ ಡಿಸೋಜಾ , ಪಂಚಾಯತ್ ಸರ್ವ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ನೋನು , ಕಾರ್ಯದರ್ಶಿಗಳಾದ ಇಸ್ಮಾಯಿಲ್ , ಮತ್ತು ಸಿಬ್ಬಂದಿಗಳಾದ ಮುಝಮ್ಮಿಲ್, ಕುಮಾರಿ ಸುಜಾತ, ಶ್ರೀಮತಿ ರೇಣುಕಾ, ಕುಮಾರಿ ರಶೀನಾ, ಮತ್ತು ಚುನಾವಣಾ ಉಸ್ತುವಾರಿ ವಹಿಸಿದ್ದ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp
Exit mobile version