Home ಕರಾವಳಿ ತಲಪಾಡಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ: SDPI ನೇತೃತ್ವದ ನಾಗರಿಕ ಸಮಿತಿ ಹೋರಾಟಕ್ಕೆ ಸ್ಪಂದಿಸಿದ...

ತಲಪಾಡಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ: SDPI ನೇತೃತ್ವದ ನಾಗರಿಕ ಸಮಿತಿ ಹೋರಾಟಕ್ಕೆ ಸ್ಪಂದಿಸಿದ ಪಂಚಾಯತ್ ಅಧಿಕಾರಿಗಳು

ತಲಪಾಡಿ: ತಲಪಾಡಿ ಗ್ರಾಮದ 1,2,3,4 ನೇ ವಾರ್ಡಿಗೆ ಟ್ಯಾಂಕರ್ ಮೂಲಕ  ಕುಡಿಯುವ ನೀರು ಸರಬರಾಜು ಆರಂಭಗೊಂಡಿದೆ. ನೀರು ಪೂರೈಸುವಂತೆ ಆಗ್ರಹಿಸಿ ಇಂದು ನಾಗರೀಕ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರು ತಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.

SDPI ಗ್ರಾಮ ಸಮಿತಿ ಅಧ್ಯಕ್ಷರಾದ ಇಮ್ರಾನ್ ಪೂಮಣ್ಣು ಮುತ್ತಿಗೆಯ ನೇತೃತ್ವವಹಿಸಿದ್ದರು. ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾದ  ಸಿದ್ದೀಕ್ ತಲಪಾಡಿ ಮತ್ತು ಎಸ್.ಡಿ.ಪಿ.ಐ ನ ಹಕೀಮ್ ಕೆಸಿ ನಗರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ್ದರು.ಈ ಸಂದರ್ಭ ಪ್ರತಿಭಟನಾಕಾರರ ಜೊತೆ ಮಾತನಾಡಿದ ಪಂಚಾಯತ್ ಅಧಿಕಾರಿಗಳು ಇಂದಿನಿಂದಲೇ ನೀರು ಸರಬರಾಜು ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು.

ಅದರಂತೆ ಇದೀಗ ನೀರು ಸರಬರಾಜು ಆರಂಭಗೊಂಡಿದ್ದು ಈ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ , ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು ಹಾಗೂ ಪಿಡಿಒ ಆಡಳಿತ ಸಿಬ್ಬಂದಿಗಳಿಗೆ ನಾಗರಿಕ ಸಮಿತಿ ಧನ್ಯವಾದ ಸಲ್ಲಿಸಿದೆ.

Join Whatsapp
Exit mobile version