Home ಟಾಪ್ ಸುದ್ದಿಗಳು ಪಣಂಬೂರು ರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸ್ ಉಪ ಆಯುಕ್ತರನ್ನು ಭೇಟಿಯಾದ SDTU ನಿಯೋಗ

ಪಣಂಬೂರು ರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸ್ ಉಪ ಆಯುಕ್ತರನ್ನು ಭೇಟಿಯಾದ SDTU ನಿಯೋಗ

ಮಂಗಳೂರು: ರಿಕ್ಷಾ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ಪಣಂಬೂರು ಬೀಚ್ ರಿಕ್ಷಾ ಪಾರ್ಕ್‌ನಲ್ಲಿ ಹಲ್ಲೆಗೊಳಗಾದ ಅರಫತ್ ಅವರಿಗೆ ಸೂಕ್ತ ನ್ಯಾಯಕ್ಕಾಗಿ ಮತ್ತು ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ SDTU ನಿಯೋಗಸಿ ಪೊಲೀಸ್ ಉಪ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿತು

ಈ ಹಿಂದೆ ಇಲ್ಲಿನ ರಿಕ್ಷಾ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ರಿಕ್ಷಾ ಚಾಲಕರು ತಗಾದೆ ಎತ್ತಿ ಕಿರುಕುಳ ನೀಡಿದ್ದರು. ನಗರದಿಂದ ಇಲ್ಲಿಗೆ ಬರುವ ರಿಕ್ಷಾಗಳು ಇಲ್ಲಿ ಪಾರ್ಕಿಂಗ್ ಮಾಡದಂತೆ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ದೂರು ದಾಖಲಾಗಿ ರಿಕ್ಷಾ ಚಾಲಕರ ಹಿತ ದೃಷ್ಟಿಯಿಂದ ರಾಜಿಯಲ್ಲಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲಾಗಿತ್ತು. ಇದೀಗ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ತೀವ್ರ ಹಲ್ಲೆ ನಡೆಸುವ ಮುಖಾಂತರ ಗೂಂಡಾ ವರ್ತನೆ ಪುನರಾವರ್ತನೆಗೊಂಡಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪೊಲೀಸ್ ಇಲಾಖೆ ಪ್ರಯತ್ನಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ, ಮಂಗಳೂರು ದಕ್ಷಿಣ ಏರಿಯಾ ಸಮಿತಿ ಅಧ್ಯಕ್ಷ ಇಕ್ಬಾಲ್ ಬೂಟ್ ಪ್ಯಾಲೇಸ್, ಉಪಾಧ್ಯಕ್ಷ ಮುಸ್ತಫಾ ಪರ್ಲಿಯಾ, ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ, ಜೊತೆ ಕಾರ್ಯದರ್ಶಿ ಶರೀಫ್ ಕುತ್ತಾರ್, ಆಟೋ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ, ಇಕ್ಬಾಲ್ ವಾಮಂಜೂರು ಮತ್ತಿತರರು ನಿಯೋಗದಲ್ಲಿದ್ದರು.

Join Whatsapp
Exit mobile version