ವಿಯೆನ್ನಾ ಉಗ್ರ ದಾಳಿಯ ವೇಳೆ ಆಸ್ಟ್ರೀಯಾ ಪೊಲೀಸ್ ಅಧಿಕಾರಿಯ ರಕ್ಷಿಸಿದ ಫೆಲೆಸ್ತೀನ್ ಯುವಕ

Prasthutha|

ವಿಯೆನ್ನಾ : ಆಸ್ಟ್ರೀಯಾದಲ್ಲಿ ಸೋಮವಾರ ನಡೆದ ಭಯೋತ್ಪಾದಕ ದಾಳಿಯ ಸಂದರ್ಭ, ಗಾಯಗೊಂಡ ಪೊಲೀಸ್ ಅಧಿಕಾರಿಯೊಬ್ಬರನ್ನು ಪ್ರಾಣಾಪಾಯದಿಂದ ರಕ್ಷಿಸುವ ಮೂಲಕ, ಒಸಾಮ ಜೋದ (23) ಎಂಬ ಯುವಕ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದ ಅಧಿಕಾರಿಯನ್ನು ರಕ್ಷಿಸುವ ಮೂಲಕ, ಫೆಲೆಸ್ತೀನ್ ಮೂಲದ ಮುಸ್ಲಿಂ ವಲಸಿಗ ಇದೀಗ ಆಸ್ಟ್ರೀಯಾದಲ್ಲಿ ಹೀರೋ ಆಗಿದ್ದಾರೆ.

- Advertisement -

ವಿಯೆನ್ನಾ ನಗರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ನಡೆಯುವಾಗ, ತನ್ನ ಪ್ರಾಣವನ್ನು ಒತ್ತೆಯಿಟ್ಟು, ಒಸಾಮ ಪೊಲೀಸ್ ಅಧಿಕಾರಿಯನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಅಧಿಕಾರಿಯನ್ನು ಕಾಂಕ್ರಿಟ್ ಬ್ಲಾಕ್ ಒಂದರಡಿ ಬಚ್ಚಿಟ್ಟು, ರಕ್ತ ಸೋರಿಕೆಯನ್ನು ತಡೆಗಟ್ಟಿ, ಇತರ ಪೊಲೀಸರಿಗೆ ಆತ ಮಾಹಿತಿ ನೀಡಿದ್ದಾರೆ. ವಿಯೆನ್ನಾ ಪೊಲೀಸರು ಒಸಾಮಗೆ ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದ ಸಲ್ಲಿಸಿದ್ದಾರೆ.

- Advertisement -