Home ಟಾಪ್ ಸುದ್ದಿಗಳು ಪಾಕಿಸ್ತಾನದ ಖ್ಯಾತ ಟಿವಿ ನಿರೂಪಕ, ಮಾಜಿ ಸಂಸದ ಅಮೀರ್ ಲಿಯಾಖತ್ ನಿಧನ !

ಪಾಕಿಸ್ತಾನದ ಖ್ಯಾತ ಟಿವಿ ನಿರೂಪಕ, ಮಾಜಿ ಸಂಸದ ಅಮೀರ್ ಲಿಯಾಖತ್ ನಿಧನ !

ಕರಾಚಿ: ಪಾಕಿಸ್ತಾನದ ಖ್ಯಾತ ಟಿವಿ ನಿರೂಪಕ, ಪಿಟಿಐ ಪಕ್ಷದ ಮಾಜಿ ಸಂಸದ ಅಮೀರ್ ಲಿಯಾಖತ್ ಹುಸೇನ್ ಗುರುವಾರ ಕರಾಚಿಯ ನಿವಾಸದಲ್ಲಿ ನಿಧನರಾಗಿದ್ದಾರೆ. ಲಿಯಾಖತ್’ಗೆ 49 ವರ್ಷ ವಯಸ್ಸಾಗಿತ್ತು.

ಅಮೀರ್ ಲಿಯಾಖತ್ ತನ್ನ ಖುದಾದ್ ಕಾಲೋನಿಯಲ್ಲಿರುವ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಲಿಯಾಖತ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಲಿಯಾಖತ್ ಅಸ್ವಸ್ಥಗೊಂಡಿದ್ದರೂ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

Join Whatsapp
Exit mobile version