‘ಇನ್ನೋಸೆಂಟ್ & ಕ್ಯೂಟ್ ಪಾಕಿಸ್ತಾನಿ ಗರ್ಲ್ಸ್’ ಎಂಬ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದ್ದ ಯುವತಿಯ ಫೋಟೋವನ್ನು ಬಿಜೆಪಿ ಐಟಿ ಸೆಲ್ನ ಖಾತೆಯಾದ ‘ವಿನಿತಾ ಹಿಂದೂಸ್ತಾನಿ’ ಎಂಬ ಖಾತೆಯು ತನ್ನ ಪ್ರೊಫೈಲ್ ನಲ್ಲಿ ಬಳಸಿರುವುದು ಪತ್ತೆಯಾಗಿದೆ.
ಟ್ವಿಟರ್ನಲ್ಲಿ ಸುಮಾರು 21 ಸಾವಿರಕ್ಕೂ ಅಧಿಕ ಫಾಲೋವರ್ಗಳನ್ನು ಹೊಂದಿದ್ದ ‘ವಿನಿತಾ ಹಿಂದೂಸ್ತಾನಿ’ ಖಾತೆಯ ಬಯೋದಲ್ಲಿ, ಬಿಹಾರಿ ಮತ್ತು ಭಾರತೀಯ ಆಗಿದ್ದಕ್ಕೆ ಹೆಮ್ಮೆ, ಟೀಚರ್, ಕೇಸರಿ ಪ್ರೀತಿ, ಬಿಜೆಪಿ ಮತ್ತು ಆರೆಸ್ಸೆಸ್ ಫಾಲೋವರ್, ಹೆಮ್ಮೆಯ ಹಿಂದೂ ಎಂದು ಬರೆಯಲಾಗಿತ್ತು.
ಇದೀಗ ಈ ಖಾತೆಯನ್ನು ಡಿಲೀಟ್ ಮಾಡಲಾಗಿದ್ದು ಅದೇ ಚಿತ್ರವನ್ನು ಬಳಸಿಕೊಂಡು ‘ವಿನಿತಾ’ ಹೆಸರಲ್ಲಿ ಮತ್ತೆ ಎರಡು ಖಾತೆಗಳು ಟ್ವಿಟರ್ನಲ್ಲಿ ಸಕ್ರೀಯವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಝುಬೇರ್, ಕ್ಯೂಟ್ ‘ಹಿಂದೂಸ್ತಾನಿ’ ಹುಡುಗ @ vinita4india ಮುಗ್ಧ ಬಿಜೆಪಿ ಬೆಂಬಲಿಗರನ್ನು ಆಕರ್ಷಿಸಲು ‘ಇನ್ನೋಸೆಂಟ್ & ಕ್ಯೂಟ್ ಪಾಕಿಸ್ತಾನಿ ಗರ್ಲ್ಸ್’ ಪೇಜ್ನಿಂದ ಚಿತ್ರವನ್ನು ಪಡೆದಿದ್ದಾನೆ” ಎಂದು ಹೇಳಿದ್ದಾರೆ.