ಪಂಜಾಬ್: ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಮತ್ತು ಏಷ್ಯನ್ ಅಂಡರ್-21 ಬೆಳ್ಳಿ ಪದಕ ವಿಜೇತ ಮಜೀದ್ ಅಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
28 ವರ್ಷದ ಮಜಿದ್ ಪಾಕ್ ಪಂಜಾಬ್ ನ ಫೈಸಲಾಬಾದ್ ಬಳಿಯ ತನ್ನ ಹುಟ್ಟೂರಾದ ಸಾಮುಂದ್ರಿಯಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರ
ಕ್ರೀಡೆಯಲ್ಲಿ ತೊಡಗಿಸಿಕೊಂಡ ದಿನದಿಂದಲೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಜಿದ್ ಮರ ಕತ್ತರಿಸುವ ಯಂತ್ರದಿಂದ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಜಿದ್ ಹಲವಾರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದು ರಾಷ್ಟ್ರೀಯ ಸರ್ಕ್ಯೂಟ್ನಲ್ಲಿ ಅಗ್ರ ಶ್ರೇಯಾಂಕದ ಆಟಗಾರರಾಗಿದ್ದರು.