ಪಾಕಿಸ್ತಾನ: ಚುನಾವಣೆಯಲ್ಲಿ ಅಕ್ರಮ ಆರೋಪಿಸಿ ಇಮ್ರಾನ್‍ಖಾನ್‌ ಪಕ್ಷದಿಂದ ಪ್ರತಿಭಟನೆ

Prasthutha|

ಇಸ್ಲಮಾಬಾದ್: ಕಳೆದ ವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷ, ದೇಶದಾದ್ಯಂತ ಪ್ರತಿಭಟನೆ ನಡೆಸಿದೆ. ಹಲವೆಡೆ ರಸ್ತೆ ತಡೆಗಳನ್ನೂ ನಡೆಸಿದ್ದಾರೆ ಎಂದು ವರದಿಯಾಗಿವೆ.

- Advertisement -

ಪಕ್ಷೇತರರಾಗಿ ಸ್ಪರ್ಧಿಸಿದ್ದ ಪಕ್ಷದ ಇನ್ನಷ್ಟು ಬೆಂಬಲಿಗರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಮತ ಎಣಿಕೆಯಲ್ಲಿ ಅಕ್ರಮ ನಡೆದಿರುವುದರಿಂದ ಅವರ ಗೆಲುವನ್ನು ಬೇರೆಯವರಿಗೆ ಕೊಡಲಾಗಿದೆ ಎಂದು ಪಿಟಿಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಮರು ಮತ ಎಣಿಕೆಗೆ ಆಗ್ರಹಿಸಿ ಹೈಕೋರ್ಟ್‍ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಕಾನೂನುಬಾಹಿರವಾಗಿ ಸಭೆ ಸೇರುವುದು, ಪ್ರತಿಭಟನೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ಪಾಕಿಸ್ತಾನದ ಕಾನೂನು ಜಾರಿ ಅಧಿಕಾರಿಗಳ ಎಚ್ಚರಿಕೆಯ ಹೊರತಾಗಿಯೂ ಮತಗಳ ಮರು ಎಣಿಕೆ ಮತ್ತು ಜೈಲಿನಲ್ಲಿರುವ ಪಕ್ಷದ ಮುಖಂಡ ಇಮ್ರಾನ್‍ಖಾನ್ ಬಿಡುಗಡೆಗೆ ಆಗ್ರಹಿಸಿದ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಲಾಹೋರ್, ರಾವಲ್ಪಿಂಡಿ, ಮುಂತಾದ ನಗರಗಳಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿವೆ.



Join Whatsapp