Home ಟಾಪ್ ಸುದ್ದಿಗಳು ಪಾಕಿಸ್ತಾನ: ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಮೃತ್ಯು

ಪಾಕಿಸ್ತಾನ: ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಮೃತ್ಯು

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿವೆ. ತೀವ್ರ ಚಳಿಯ ವಾತಾವರಣದಿಂದಾಗಿ ಈ ಸಾವು ಸಂಭವಿಸಿವೆ ಎಂದು ಸರ್ಕಾರ ಶುಕ್ರವಾರ ದೃಢಪಡಿಸಿದೆ.

ಮೃತಪಟ್ಟ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಹಾಗೂ ನ್ಯುಮೋನಿಯಾ ಲಸಿಕೆ ಪಡೆದಿರಲಿಲ್ಲ ಎಂದು ಅಲ್ಲಿನ ಸ್ಥಳಿಯ ಸರ್ಕಾರ ಮಾಹಿತಿ ನೀಡಿದೆ.


ಜನವರಿ 1ರಿಂದ ಪಂಜಾಬ್ ಪ್ರಾಂತ್ಯದಲ್ಲಿ ಒಟ್ಟು 10,520 ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ. 220 ಮಕ್ಕಳು ಮೃತಪಟ್ಟಿದ್ದು, ಅವರೆಲ್ಲರೂ 5 ವರ್ಷದೊಳಗಿನವರು ಎಂದು ಸರ್ಕಾರ ದೃಢಪಟಿಸಿದೆ.

Join Whatsapp
Exit mobile version