ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯ ಮಹತ್ತರ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, 19.5 ಓವರ್‌ಗಳಲ್ಲಿ 147 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ನಾಯಕನ ತೀರ್ಮಾನವನ್ನು ಸಮರ್ಥಿಸುವ ರೀತಿಯಲ್ಲಿ ಬೌಲಿಂಗ್ ಮಾಡಿದ ಭಾರತದ ಬೌಲರ್‌ಗಳು, ಪಾಕಿಸ್ತಾನ ತಂಡವನ್ನು, ಸಾಮಾನ್ಯ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ನಾಯಕನ ತೀರ್ಮಾನವನ್ನು ಸಮರ್ಥಿಸುವ ರೀತಿಯಲ್ಲಿ ಬೌಲಿಂಗ್ ಮಾಡಿದ ಭಾರತದ ಬೌಲರ್‌ಗಳು, ಪಾಕಿಸ್ತಾನ ತಂಡವನ್ನು, ಸಾಮಾನ್ಯ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಬಾಬರ್ ಅಝಮ್, ಕೇವಲ 10 ರನ್‌ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದರು. ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು. ಅನುಭವಿ ಭುವನೇಶ್ವರ್ ಬೌಲಿಂಗ್‌ನಲ್ಲಿ ಅರ್ಶ್‌ದೀಪ್‌ಗೆ ಕ್ಯಾಚಿತ್ತು ಪಾಕ್ ನಾಯಕ ನಿರ್ಗಮಿಸಿದರು. ಮತ್ತೋರ್ವ ಆರಂಭಿಕ ಮುಹಮ್ಮದ್ ರಿಝ್ವಾನ್ ತಾಳ್ಮೆಯ ಆಟದ ಮೂಲಕ 43 ರನ್‌ಗಳಿಸಿದ್ದ ವೇಳೆ ಪಾಂಡ್ಯಾ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇಫ್ತಿಕಾರ್ ಅಹ್ಮದ್ 28 ರನ್‌ಗಳಿಸಿದರು. ಫಖರ್ ಝಮಾನ್, ಶಾದಾಬ್ ಖಾನ್ ತಲಾ 10 ರನ್‌ಗಳಿಸಿದರೆ, ಆಸಿಫ್ ಅಲಿ 9 ರನ್‌ಗಳಿಸಿ ನಿರ್ಗಮಿಸಿದರು.
ಭಾರತದ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಿಟಿಸಿದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಆಲ್‌ರೌಂಡರ್ ಹಾರ್ದಿಕ್ 3 ವಿಕೆಟ್ ಪಡೆದರು. ಅರ್ಷ್‌ದೀಪ್ ಸಿಂಗ್ ಎರಡು ಮತ್ತು ಆವೇಶ್ ಖಾನ್ ಎರಡು ವಿಕೆಟ್ ಪಡೆದರು.