Home ಟಾಪ್ ಸುದ್ದಿಗಳು ಪಾಕಿಸ್ತಾನ ವೀಸಾ ನಿರಾಕರಿಸಿಲ್ಲ: ಶಿಹಾಬ್ ಚೊಟ್ಟೂರು ಸ್ಪಷ್ಟನೆ

ಪಾಕಿಸ್ತಾನ ವೀಸಾ ನಿರಾಕರಿಸಿಲ್ಲ: ಶಿಹಾಬ್ ಚೊಟ್ಟೂರು ಸ್ಪಷ್ಟನೆ

ನವದೆಹಲಿ: ಪಾಕಿಸ್ತಾನ ನನಗೆ ವೀಸಾ ನಿರಾಕರಿಸಿಲ್ಲ, ಕೆಟಗರಿ ಸಮಸ್ಯೆಯ ಕಾರಣದಿಂದಾಗಿ ತಡೆ ಉಂಟಾಗಿದೆ ಎಂದು ಕಾಲ್ನಡಿಗೆಯಲ್ಲಿ ಹಜ್ ಗೆ ಹೊರಟಿರುವ ಕೇರಳ ಮೂಲದ ಶಿಹಾಬ್ ಚೊಟ್ಟೂರು ಸ್ಪಷ್ಟನೆ ನೀಡಿದ್ದಾರೆ.


ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂದು ಸುದ್ದಿ ಹಬ್ಬಿದ್ದರಿಂದ ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.


ಟೂರಿಸ್ಟ್ ವೀಸಾದಲ್ಲಿ ತೆರಳಿದರೆ ನಾನು ಪಾಕಿಸ್ತಾನಕ್ಕೆ ತೆರಳಿ ಮರಳಿ ಭಾರತಕ್ಕೆ ಬರಬಹುದು. ಆದರೆ, ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ ಇರಾನ್ ಗೆ ಹೋಗಬೇಕಾದರೆ ಟ್ರಾನ್ಸಿಟ್ ವೀಸಾ ಬೇಕಾಗಿದೆ. ಸದ್ಯ ನನಗೆ ಟೂರಿಸ್ಟ್ ವೀಸಾ ಸಿಕ್ಕಿದ್ದರಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿ ಇರಾನಿನ ತಪ್ತಾನ್ ಗಡಿಯ ಮೂಲಕ ಇರಾನಿಗೆ ಪ್ರವೇಶಿಸಬೇಕಿದೆ ಮತ್ತು ಇದಕ್ಕಾಗಿ ವಿದೇಶಾಂಗ ಸಚಿವಾಲಯದ ಒಂದು ದಾಖಲೆ ಕೂಡ ಬೇಕಿದೆ. ಅದು ಲಭ್ಯವಾದರೆ ಟ್ರಾನ್ಸಿಟ್ ವೀಸಾ ಕೂಡ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸ್ಪಲ್ಪ ತಡವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Join Whatsapp
Exit mobile version