Home ಟಾಪ್ ಸುದ್ದಿಗಳು ಪಾಕಿಸ್ತಾನದ ಅಭಿಮಾನಿಯಿಂದ ಪುನೀತ್ ರಾಜ್ ಕುಮಾರ್ ಗೆ ಕನ್ನಡ ಹಾಡಿನ ಮೂಲಕ ಗೌರವ!

ಪಾಕಿಸ್ತಾನದ ಅಭಿಮಾನಿಯಿಂದ ಪುನೀತ್ ರಾಜ್ ಕುಮಾರ್ ಗೆ ಕನ್ನಡ ಹಾಡಿನ ಮೂಲಕ ಗೌರವ!

► ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿ ಈ ಹಾಡು ಹಾಡಲಾಯಿತೇ?

ಲಾಹೋರ್ : ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕರುನಾಡು ಸೇರಿದಂತೆ ಇಡೀ ಭಾರತವೇ ಕಂಬನಿ ಮಿಡಿದಿದೆ. ಕನ್ನಡದ ಮೇರು ನಟನ ದಿಢೀರ್ ವಿಧಿವಶಕ್ಕೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಭಾರತದ ಚಿತ್ರರಂಗದ ನಟ ನಟಿಯರು ಸೇರಿದಂತೆ ಅಪಾರ ಅಭಿಮಾನಿಗಳು ದುಖ ತಪ್ತರಾಗಿದ್ದಾರೆ.

ಇದೀಗ ಪಾಕಿಸ್ಥಾನ ಮೂಲದ ಲಾಹೋರ್ ನ ಅಭಿಮಾನಿಯೊಬ್ಬ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ರಾಜ್ ಕುಮಾರ್ ಚಿತ್ರದ ಬೊಂಬೆ ಹೇಳುತೈತೆ ಮತ್ತು ನಿನ್ನಿಂದಲೇ ಕನ್ನಡ ಹಾಡಿಗೆ ಧ್ವನಿಗೂಡಿಸಿರುವ ವಿಡೀಯೋ ಒಂದು ವೈರಲ್ ಆಗಿದೆ. ಲಾಹೋರ್ ನ ಅಜ್ಮಲ್ ಮುಘಲ್ ಪುನೀತ್ ನಟಿಸಿರುವ ಹಾಡನ್ನು ಹಾಡಿ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಿದ್ದಾರೆ.

ಈ ಹಾಡು ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿ ಹಾಡಲಾಗಿದೆ ಎಂದು ಕೆಲವೊಂದು ಸುದ್ದಿ ಸಂಸ್ಥೆಗಳು ವರದಿ ಬಿತ್ತರಿಸಿದ್ದು, ಆದರೆ ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. 2018ರ ಜನವರಿ ತಿಂಗಳಿನಲ್ಲಿ ಹಾಡಿರುವ ಈ ವೀಡಿಯೋದಲ್ಲಿ ಅಜ್ಮಲ್ ನಾನೊಬ್ಬ ಪಾಕಿಸ್ಥಾನಿಗ, ಕನ್ನಡ ಒಂದು ಕಠಿಣ ಹಾಗೂ ಮಧುರವಾದ ಭಾಷೆಯಾಗಿದೆ. ಅದನ್ನು ನಾನು ಚೆನ್ನಾಗಿ ಹಾಡಲು ಇಷ್ಟಪಡುತ್ತೇನೆ, ಮತ್ತು ನಾನು ಈ ಹಾಡನ್ನು ಅರ್ಥವಿಲ್ಲದೆ ಆನಂದಿಸುವುದು ಉತ್ತಮ ವಿಷಯವಾಗಿದೆ ಎಂದು ಬರೆದು ಕನ್ನಡ ಪ್ರೇಮವನ್ನು ತೋರ್ಪಡಿಸಿದ್ದಾರೆ.

Join Whatsapp
Exit mobile version