ಲಾಹೋರ್ : ಮುಂಬೈ ಭಯೋತ್ಪಾದಕ ದಾಳಿ ರೂವಾರಿ ಮತ್ತು ಜಮಾತ್-ಉದ್-ದಾವಾ (ಜೆಯುಡಿ) ಮುಖ್ಯಸ್ಥ ಹಫೀಝ್ ಸಯೀದ್ ಗೆ ಪಾಕಿಸ್ತಾನದ ಭಯೋತ್ಪಾದನೆ ತಡೆ ನ್ಯಾಯಾಲಯವೊಂದು ಇನ್ನೆರಡು ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಿಶ್ವಸಂಸ್ಥೆಯಿಂದ ಭಯೋತ್ಪಾದಕನೆಂದು ಘೋಷಿಸಲ್ಪಟ್ಟಿರುವ ಮತ್ತು ಅಮೆರಿಕದಿಂದ 10 ದಶಲಕ್ಷ ಡಾಲರ್ ಬಹುಮಾನ ಘೋಷಿತನಾಗಿರುವ ಸಯೀದ್ ಕಳೆದ ವರ್ಷ ಜು.17ರಂದು ಬಂಧಿತನಾಗಿದ್ದಾನೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡಿದ ಪ್ರಕರಣದಲ್ಲಿ ಆತ ಬಂಧಿತನಾಗಿದ್ದ. ಎರಡು ಭಯೋತ್ಪಾದಕ ದಾಳಿಗಳಿಗೆ ಹಣಕಾಸು ನೆರವು ನೀಡಿದ್ದ ಪ್ರಕರಣಗಳಲ್ಲಿ ಕಳೆದ ಫೆಬ್ರವರಿಯಲ್ಲಿ ನ್ಯಾಯಾಲಯವೊಂದು 11 ವರ್ಷದ ಜೈಲು ಶಿಕ್ಷೆ ವಿಧಿಸಿತ್ತು.
ಸಯೀದ್ ಈಗ ಲಾಹೋರ್ ನ ಬಿಗಿ ಭದ್ರತೆಯ ಕೋಟ್ ಲಾಖ್ ಪತ್ ಜೈಲಿನಲ್ಲಿರಿಸಲ್ಪಟ್ಟಿದ್ದಾನೆ.
ಸಯೀದ್ ಮತ್ತು ಇತರ ಇಬ್ಬರು ಸಹಚರರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸಯೀದ್ ನ ಬಾವ ರಹ್ಮಾನ್ ಮಕ್ಕಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.