Home ಕ್ರೀಡೆ ನೆದರ್ಲೆಂಡ್ ಮಣಿಸಿ, 6 ವಿಕೆಟ್ ಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿದ ಪಾಕಿಸ್ತಾನ

ನೆದರ್ಲೆಂಡ್ ಮಣಿಸಿ, 6 ವಿಕೆಟ್ ಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿದ ಪಾಕಿಸ್ತಾನ

ಪರ್ತ್: ಟಿ20 ವಿಶ್ವಕಪ್ ನಲ್ಲಿ ಈವರೆಗೆ ಗೆಲುವಿನ ಖಾತೆ ತೆರೆಯದ ಪಾಕಿಸ್ತಾನ ತಂಡವು ಇಂದು ನೆದರ್ಲೆಂಡ್ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ ಗೆಲುವಿನ ನಗೆಯನ್ನು ಬೀರಿದೆ.

ಆಸ್ಟ್ರೇಲಿಯಾದ ಪರ್ತ್ ನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಪಾಕಿಸ್ತಾನಕ್ಕೆ ನೆದರ್ಲೆಂಡ್ 92 ರನ್ ಗಳ ಸಾಧಾರಣ ಗುರಿ ನೀಡಿತ್ತು. ಈ ಸುಲಭದ ಗುರಿಯನ್ನು ಬೇಧಿಸಿದ ಪಾಕಿಸ್ತಾನವು ಅಮೋಘ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೆದರ್ಲೆಂಡ್, ಪಾಕಿಸ್ತಾನದ ಪರಿಣಾಮಕಾರಿ ಬೌಲಿಂಗ್ ಗೆ ತತ್ತರಿಸಿ 92 ರನ್ ಸಾಧಾರಣ ಗುರಿ ನೀಡಿತು. ಈ ಗುರಿಯನ್ನು ಪಾಕಿಸ್ತಾನ ತಂಡವು 13.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬೇಧಿಸಿತು.

ಪಾಕಿಸ್ತಾನದ ಶದಾಬ್ ಖಾನ್ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ವಾಸೀಂ ಜೂನಿಯರ್ 2, ಶಾಹೀನ್ ಅಫ್ರಿದಿ, ನಸೀಂ ಶಾ ಹಾಗೂ ಹ್ಯಾರಿಸ್ ರೌಫ್ ತಲಾ ಒಂದೊಂದು ವಿಕೆಟ್ ಪಡೆದರು. ಮುಹಮ್ಮದ್ ರಿಝ್ವಾನ್ 49 ರನ್ ಗಳಿಸುವ ಮೂಲಕ ಚೊಚ್ಚಲ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ನೆದರ್ಲೆಂಡ್ ಈ ಸೋಲಿನೊಂದಿಗೆ ಮೊದಲ ತಂಡವಾಗಿ ಸೆಮೀಸ್ ರೇಸ್ನಿಂದ ಹೊರಬಿದ್ದಿರುವ ತಂಡವಾಗಿದೆ.

Join Whatsapp
Exit mobile version