ಟೋಕಿಯೋ ಒಲಿಂಪಿಕ್ಸ್| ಕುಸ್ತಿ : ಕಂಚು ಗೆದ್ದ ಪೈಲ್ವಾನ್ ಪೂನಿಯಾ

Prasthutha|

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ವಿಶ್ವ 2ನೇ ಶ್ರೇಯಾಂಕಿತ ಭಾರತದ ಪೈಲ್ವಾನ್ ಭಜರಂಗ್ ಪೂನಿಯಾ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಕಜಕಸ್ತಾನದ ಎದುರಾಳಿ ದೌಲೆಟ್ ನಿಯಬೆಕೊವ್’ರನ್ನು ಏಕಪಕ್ಷೀಯವಾಗಿ 8-0 ಅಂತರದಲ್ಲಿ ಸದೆಬಡಿದ ಪೂನಿಯಾ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

- Advertisement -


ಆ ಮೂಲಕ ಭಾರತ ಟೋಕಿಯೋ ಒಲಿಂಪಿಕ್ಸ್ ನಲ್ಲಿ 6 ನೇ ಪದಕವನ್ನು ಗೆದ್ದ ಸಾಧನೆ ಮಾಡಿದೆ. ಮೀರಾಬಾಯಿ ಚಾನು ಹಾಗೂ ರವಿಕುಮಾರ್ ದಹಿಯಾ ಬೆಳ್ಳಿ ಹಾಗೂ ಬ್ಯಾಡ್ಮಿಂಟನ್’ನಲ್ಲಿ ಪಿವಿ ಸಿಂಧು, ಬಾಕ್ಸಿಂಗ್’ನಲ್ಲಿ ಲವ್ಲೀನಾ ಜೊತೆಗೆ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.


65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿಯ ಸೆಮಿಫೈನಲ್ ಪಂದ್ಯದಲ್ಲಿ ಭಜರಂಗ್ ಪೂನಿಯಾ 5-12 ಅಂಕಗಳ ಅಂತರದಲ್ಲಿ ಅಜರ್ಬೈಜಾನಿಯಾದ ಹಾಜಿ ಆಲಿಯಾವ್ ಎದುರು ಆಘಾತಕಾರಿ ಸೋಲು ಕಂಡಿದ್ದರು.



Join Whatsapp