Home ಟಾಪ್ ಸುದ್ದಿಗಳು ಉತ್ತರ ಪ್ರದೇಶ | ಆಸ್ಪತ್ರೆಯ ಹೊರಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟ: ಇಬ್ಬರ ಸಾವು

ಉತ್ತರ ಪ್ರದೇಶ | ಆಸ್ಪತ್ರೆಯ ಹೊರಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟ: ಇಬ್ಬರ ಸಾವು

ಚಂದೌಲಿ: ಖಾಸಗಿ ಆಸ್ಪತ್ರೆಯ ಹೊರಗೆ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿರುವ ಘಟನೆ ಮೊಘಲ್ಸರಾಯ್ ನ ರವಿ ನಗರ ಪ್ರದೇಶದಲ್ಲಿ ನಡೆದಿದೆ.


ಸ್ಫೋಟದ ಭೀಕರತೆಗೆ ಇಬ್ಬರ ದೇಹದ ಹಲವು ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದ ಸದ್ದು ಕೇಳಿ ಸುತ್ತಮುತ್ತಲಿನವರೂ ಭಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ರವಿವನಗರದ ದಯಾಳ್ ಆಸ್ಪತ್ರೆಯ ಹೊರಗೆ ಆಮ್ಲಜನಕದ ಸಿಲಿಂಡರ್ ತುಂಬಿರುವ ವಾಹನ ನಿಂತಿತ್ತು ಎಂದು ಹೇಳಲಾಗುತ್ತಿದೆ. ಕೆಲವರು ಸಿಲಿಂಡರ್ ಇಳಿಸುತ್ತಿದ್ದರು. ಅದೇ ವೇಳೆ, ಟ್ರ್ಯಾಕ್ಟರ್’ನ ಟ್ರಾಲಿ ಈ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ತುಂಬಿದ ಸಿಲಿಂಡರ್ ಕೆಳಗೆ ಬಿದ್ದು ದೊಡ್ಡ ಸದ್ದಿನೊಂದಿಗೆ ಸ್ಫೋಟಗೊಂಡಿದೆ ಎನ್ನಲಾಗಿದೆ.

Join Whatsapp
Exit mobile version