Home ಟಾಪ್ ಸುದ್ದಿಗಳು ಬಿಬಿಎಂಪಿಯಿಂದ ಬೆಂಗಳೂರಿನ ಓವರ್ ಹೆಡ್ ಆಪ್ಟಿಕಲ್ ಫೈಬರ್ ತೆರವು: ಸಿಒಎಐನಿಂದ ಖಂಡನೆ

ಬಿಬಿಎಂಪಿಯಿಂದ ಬೆಂಗಳೂರಿನ ಓವರ್ ಹೆಡ್ ಆಪ್ಟಿಕಲ್ ಫೈಬರ್ ತೆರವು: ಸಿಒಎಐನಿಂದ ಖಂಡನೆ

ಬೆಂಗಳೂರು: ಭಾರತದ ಟೆಲಿಕಮ್ಯುನಿಕೇಷನ್ಸ್ ಉದ್ಯಮದ ಪ್ರಾತಿನಿಧಿನ ಸಂಸ್ಥೆ -ಸಿಒಎಐ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ಮೇಲ್ಭಾಗದಲ್ಲಿ ಹರಡಿದ ಆಪ್ಟಿಕಲ್ ಫೈಬರ್ ಕತ್ತರಿಸುವ ಉಪಕ್ರಮವನ್ನು ಬಲವಾಗಿ ಖಂಡಿಸಿದೆ. ಬಿಬಿಎಂಪಿ ಕೈಗೊಂಡ ಕ್ರಮವು ನಗರದಾದ್ಯಂತ ದಟ್ಟವಾದ ಜನಸಂಖ್ಯೆ ಹೊಂದಿದ ಪ್ರದೇಶಗಳಲ್ಲಿ ಸಂಪರ್ಕ ಸ್ಥಗಿತ ಹಾಗೂ ಅನನುಕೂಲ ಸೃಷ್ಟಿಸಿದೆ.

ಈ ಹಂತದಲ್ಲಿ ಮೇಲ್ಭಾಗದಲ್ಲಿ ವಿಸ್ತರಿಸಿರುವ ಫೈಬರ್ ಕತ್ತರಿಸುವುದು ಟಿಎಸ್ ಪಿಗಳಲ್ಲಿ ಮಾತ್ರವಲ್ಲದೆ ಅಗತ್ಯ ಟೆಲಿಕಾಂ ಸೇವೆಗಳಿಂದ ವಂಚಿತರಾಗುವ ನಾಗರಿಕರಲ್ಲೂ ಆತಂಕ ಮೂಡಿಸಿದೆ. ಈ ಫೈಬರ್ ಕತ್ತರಿಸುವ ಉಪಕ್ರಮವನ್ನು ಕಗ್ಗದಾಸಪುರ; ಯಲಹಂಕ ವಲಯ ಹಾಗೂ ಮಹದೇವಪುರ ವಲಯಗಳನ್ನು ಒಳಗೊಂಡು ಹಲವಾರು ಪ್ರದೇಶಗಳಲ್ಲಿ ಟಿಎಸ್ಪಿಗಳಿಗೆ ಯಾವುದೇ ಮಾಹಿತಿ ನೀಡದೆ ಕೈಗೊಳ್ಳಲಾಗಿದೆ. ಬಿಬಿಎಂಪಿ ಈ ಕೇಬಲ್ ಕತ್ತರಿಸುವುದು ಡಿಜಿಟಲ್ ಬೆಂಗಳೂರು ಯೋಜನೆಗೆ ಅತ್ಯಂತ ದೊಡ್ಡ ಹಿನ್ನಡೆ ತರಲಿದ್ದು ಇದರಿಂದ ರೀಟೇಲ್ ಮಳಿಗೆಗಳ ಪಾಯಿಂಟ್ ಆಫ್ ಸೇಲ್ ಅಪ್ಲಿಕೇಷನ್ಗಳು ಮತ್ತು ಬೆಂಗಳೂರಿನ ವಿವಿಧ ಸರ್ಕಾರದ ಸೇವೆಗಳಿಗೆ ಕೂಡಾ ತೀವ್ರ ಪರಿಣಾಮ ಬೀರುತ್ತದೆ.

ಕರ್ನಾಟಕದಲ್ಲಿ ಟೆಲಿಫೋನ್, ಮೊಬೈಲ್ ಮತ್ತು ಇಂಟರ್ನೆಟ್ ಸಂವಹನಗಳಿಗೆ ಬೆಂಬಲಿಸಲು 146300 ಬೇಸ್ ಟ್ರಾನ್ಸೀವರ್ ಸ್ಟೇಷನ್ಸ್ (ಬಿಟಿಎಸ್ಗಳು) ಮತ್ತು 43,900 ಟವರ್ ಗಳನ್ನು ಅಳವಡಿಸಲಾಗಿದೆ. ಟಿಎಸ್ ಪಿಗಳು ಮತ್ತು ಐಎಸ್ ಪಿಗಳು ಬಿಬಿಎಂಪಿ ಅನುಮೋದನೆಯೊಂದಿಗೆ ಮೇಲ್ಭಾಗದ ಫೈಬರ್ ಅಳವಡಿಸಲು ಸೀಮಿತವಾಗಿದ್ದಾರೆ ಮತ್ತು ಅವುಗಳನ್ನು ಉದ್ದೇಶರಹಿತವಾಗಿ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ ಇತ್ಯಾದಿಗಳು ನಡೆಸುವ ವಿವಿಧ ಕಾಮಗಾರಿಗಳಿಗೆ ಕತ್ತರಿಸಲಾಗುತ್ತದೆ ಹಾಗೂ ನಿವಾರಿಸಲಾಗುತ್ತದೆ.

ಪ್ರಾತಿನಿಧಿಕ ಸಂಸ್ಥೆಯಾಗಿ ಸಿಒಎಐ, ಬಿಬಿಎಂಪಿಯನ್ನು ಕನಿಷ್ಠ 6 ತಿಂಗಳ ಅವಧಿಯನ್ನು ಸದಸ್ಯ ಟಿಎಸ್ ಪಿಗಳಿಗೆ ನೀಡಿದರೆ ಮೇಲ್ಭಾಗದಲ್ಲಿರುವ ಒಎಫ್ ಸಿಗಳನ್ನು ಭೂಮಿಯಲ್ಲಿ ಅಳವಡಿಸಬಹುದು ಎಂದು ಕೋರಿದೆ. ಎಲ್ಲ ಒಎಫ್ಸಿಗಳನ್ನು ಸಂಬಂಧಿಸಿದ ಸಂಸ್ಥೆಗಳ ಅನುಮೋದನೆಯೊಂದಿಗೆ ಅಳವಡಿಸಲಾಗಿದೆ ಮತ್ತು ಪ್ರಸ್ತುತದ ನಿಯಮಗಳು ಹಾಗೂ ನಿಬಂಧನೆಗಳ ಅನ್ವಯ ಶುಲ್ಕವನ್ನೂ ಮಾಡಲಾಗಿದೆ.

ಓವರ್ ಹೆಡ್ ಒಎಫ್ ಸಿಯನ್ನು ಭೂಮಿಯಲ್ಲಿ ಹಾಕಲು ಯಾವುದೇ ಹೆಚ್ಚುವರಿ ಶುಲ್ಕವನ್ನು ಸದಸ್ಯರಿಗೆ ವಿಧಿಸಬಾರದು ಎಂದು ನಾವು ಕೋರಿದ್ದೇವೆ. ಅಲ್ಲದೆ ಅಲ್ಲಿಯವರೆಗೂ ಸಂಬಂಧಪಟ್ಟ ಸಂಸ್ಥೆಗಳು ನಮ್ಮ ಸದಸ್ಯ ಟಿಎಸ್ಪಿಗಳು/ಐಎಸ್ಪಿಗಳಿಗೆ ಸಂಬಂಧಿಸಿದ ಓವರ್ ಹೆಡ್ ಒಎಫ್ಸಿಯನ್ನು ನಿವಾರಿಸಬಾರದು ಎಂದು ಕೋರಿದ್ದೇವೆ, ಏಕೆಂದರೆ ಅಂತಹ ಕ್ರಮವು ನಮ್ಮ ಟಿಎಸ್ ಪಿಗಳ ನೀಡುತ್ತಿರುವ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದಾಗ್ಯೂ, ಬಿಬಿಎಂಪಿ ಮತ್ತೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಫೈಬರ್ ಕತ್ತರಿಸುವ ಉಪಕ್ರಮ ಪ್ರಾರಂಭಿಸಿದೆ.

ಸಿಒಎಐನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಎಸ್.ಪಿ.ಕೊಚ್ಚರ್, “ಬಿಬಿಎಂಪಿ ಯಾವುದೇ ಮುನ್ಸೂಚನೆ ನೀಡದೆ ಒಎಫ್ ಸಿ ಕೇಬಲ್ಗಳನ್ನು ಕತ್ತರಿಸಿರುವುದು ನಮಗೆ ತೀವ್ರ ನಿರಾಸೆ ತಂದಿದೆ. ಇದು ನೆಟ್ ವರ್ಕ್ ಹಾಗೂ ಉದ್ಯಮಗಳ ಸ್ಥಗಿತಕ್ಕೆ ಕಾರಣವಾಗಿದೆ, ಮುಖ್ಯವಾಗಿ ನಗರದ ಐಟಿ ಕಂಪನಿಗಳು ಹಾಗೂ ಪ್ರಸ್ತುತ ಕೋವಿಡ್ ಸನ್ನಿವೇಶದಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ತೀವ್ರ ಪರಿಣಾಮ ಬೀರಿದೆ. ಉದ್ಯಮವು ಏರಿಯಲ್ ಫೈಬರ್ ಅನ್ನು ನೆಲದಾಳಕ್ಕೆ ತರಲು ಶ್ರಮಿಸುತ್ತಿರುವಾಗ ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಫೈಬರ್ ಕತ್ತರಿಸುವ ಕ್ರಮಗಳನ್ನು ಕೈಗೊಳ್ಳಬಾರದು ಮತ್ತು ಮೂಲಸೌಕರ್ಯ ಉಳಿಸಲು ಕೋರುತ್ತೇವೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಭಾರತದ ಐಟಿ ರಾಜಧಾನಿಗೆ ವಿಶ್ವಮಟ್ಟದ ಡಿಜಿಟಲ್ ಕನೆಕ್ಟಿವಿಟಿಯೊಂದಿಗೆ ಭವಿಷ್ಯ ಸನ್ನದ್ಧ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಕೋರುತ್ತೇವೆ” ಎಂದರು.

ಟೆಲಿಕಾಂ ಎನ್ನುವುದು ಅಗತ್ಯ ಸೇವೆಯಾಗಿದೆ. ದೇಶವು ನ್ಯಾಷನಲ್ ಬ್ರಾಡ್ ಬ್ಯಾಂಡ್ ಮಿಷನ್ ಅಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಟೆಲಿಕಾಂ ಮೂಸೌಕರ್ಯ ಅಭಿವೃದ್ಧಿಯತ್ತ ಮುನ್ನಡೆದಿರುವಾಗ ಇಂತಹ ತೀರ್ಮಾನಗಳು ಪ್ರಗತಿಯನ್ನು ಕುಂಠಿತಗೊಳಿಸುತ್ತವೆ. ಇದು ದೇಶವನ್ನು ಡಿಜಿಟಲಿ ಸಂಪರ್ಕಿತ ಭಾರತವಾಗಿ ಸೃಷ್ಟಿಸುವ ಉದ್ದೇಶದಿಂದ ಹಿಂದಕ್ಕೆ ಕೊಂಡೊಯ್ಯುತ್ತದೆ ಮತ್ತು 2025ರ ವೇಳೆಗೆ 5ಟ್ರಿಲಿಯನ್ ಯು.ಎಸ್. ಡಾಲರ್ ಅರ್ಥವ್ಯವಸ್ಥೆಯಾಗುವ ಭವಿಷ್ಯಾತ್ಮಕ ಆಕಾಂಕ್ಷೆಗಳಿಗೆ ಅಡ್ಡಿಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version