Home ಟಾಪ್ ಸುದ್ದಿಗಳು ಪರೀಕ್ಷಾ ಪೇ ಚರ್ಚಾ| 5 ಆವೃತ್ತಿಗಳಲ್ಲಿ ತಗುಲಿದ ಒಟ್ಟು ಖರ್ಚು ಎಷ್ಟು ಗೊತ್ತೇ?

ಪರೀಕ್ಷಾ ಪೇ ಚರ್ಚಾ| 5 ಆವೃತ್ತಿಗಳಲ್ಲಿ ತಗುಲಿದ ಒಟ್ಟು ಖರ್ಚು ಎಷ್ಟು ಗೊತ್ತೇ?

ನವದೆಹಲಿ : ಮಕ್ಕಳು ಮತ್ತು ಪೋಷಕರೊಂದಿಗೆ ಪ್ರಧಾನಿ ಮೋದಿ ನಡೆಸಿದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ ಐದು ಆವೃತ್ತಿಗಳಿಗೆ 28 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಿದೆ ಎಂದು ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದು, ಮೊದಲ
ಆವೃತ್ತಿಗೆ 2018ರಲ್ಲಿ 3.37 ಕೋಟಿ, 2019ರಲ್ಲಿ 4.93ಕೋಟಿ, 2020ರಲ್ಲಿ 5.69 ಕೋಟಿ, 2021ರಲ್ಲಿ 6ಕೋಟಿ ವೆಚ್ಚ ಹಾಗೂ 2022ರಲ್ಲಿ 8.61 ಕೋಟಿ ಹಣ ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ 2023ರ 6ನೇ ಆವೃತ್ತಿಯ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ.
6ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಜ.27ರಂದು ದೆಹಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ನಡೆದಿದೆ.

Join Whatsapp
Exit mobile version