ಲಕ್ಷದ್ವೀಪ : ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿರುವ ಲಕ್ಷದ್ವೀಪದ ಆಡಳಿತಗಾರ ಪ್ರಫುಲ್ ಖೋಡಾ ಪಟೇಲ್ ವಿರುಧ್ದ ಕ್ರಮಕೈಗೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಗೆ ಲಕ್ಷದ್ವೀಪ ನಿವಾಸಿಗಳು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಸಹಿ ಸಂಗ್ರಹಿಸಿ ಅರ್ಜಿಗಳನ್ನು ಸಲ್ಲಿಸುವುದಾಗಿ ತೀರ್ಮಾನಿಸಿದ್ದಾರೆ.
ಪ್ರಫುಲ್ ಖೋಡಾರ ವಿರುಧ್ದ ಕ್ರಮಕೈಗೊಳ್ಳುವಂತೆ ಆರಂಭಿಸಿದ ಸಹಿ ಸಂಗ್ರಹ ಅಭಿಯಾನಕ್ಕೆ ಲಕ್ಷದ್ವೀಪ ಸ್ಟೂಡೆಂಟ್ಸ್ ಅಸೋಸಿಯೇಷನ್ , ವಿಧ್ಯಾರ್ಥಿ ಸಂಘಟನೆ ಎನ್ ಎಸ್ ಯುಐ, ಸಹಿತ ಹಲವಾರು ಸಂಘಟನೆಗಳು ಕೈಜೋಡಿಸಿದ್ದು, ರಾಷ್ಟ್ರಪತಿಗೆ ಇಮೇಲ್ ಸಂದೇಶ ರವಾನಿಸಿ ಕ್ರಮಜರುಗಿಸುವಂತೆ ಕೇಳಿಕೊಂಡಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ಎಲ್ಲಾ ನಿವಾಸಿಗಳ ಪ್ರತಿಭಟನೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಂಸದ ಮಹಮ್ಮದ್ ಫೈಝಲ್ ಇಂದು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.