Home ಟಾಪ್ ಸುದ್ದಿಗಳು “ನಮ್ಮ ಆರೆಸ್ಸೆಸ್” ಎಂದ ಸ್ಪೀಕರ್ ವಿರುದ್ಧ ಕೈ ಶಾಸಕರು ಕೆಂಡಾಮಂಡಲ

“ನಮ್ಮ ಆರೆಸ್ಸೆಸ್” ಎಂದ ಸ್ಪೀಕರ್ ವಿರುದ್ಧ ಕೈ ಶಾಸಕರು ಕೆಂಡಾಮಂಡಲ

ಬೆಂಗಳೂರು: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತಿನ ವೇಳೆ ಆರೆಸ್ಸೆಸ್ ಕುರಿತು ಪ್ರಸ್ತಾಪಿಸಿದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ , ನೀವೇಕೆ ನಮ್ಮ ಆರೆಸ್ಸೆಸ್ ಅನ್ನು ಇಷ್ಟೊಂದು ದೂಷಿಸುತ್ತೀರಾ, ನಮ್ಮ ಆರೆಸ್ಸೆಸ್ ಬಗ್ಗೆ ಹೀಗೆಲ್ಲಾ ಹೇಳಬಹುದೇ ಎಂದು ಸಿದ್ದರಾಮಯ್ಯರನ್ನು ಇಂದು ಪ್ರಶ್ನಿಸಿದ್ದಾರೆ.

ಸ್ಪೀಕರ್ ಕಾಗೇರಿಯ ನಮ್ಮ ಆರೆಸ್ಸೆಸ್ ಮಾತಿಗೆ ಗರಂ ಆದ ಶಾಸಕ ಝಮೀರ್ ಅಹ್ಮದ್ ಅಧ್ಯಕ್ಷರ ಪೀಠದಲ್ಲಿದ್ದು ನೀವು ಇಂಥ ಮಾತು ಆಡಬಹುದೇ? ನಮ್ಮ ಆರೆಸ್ಸೆಸ್ ಎನ್ನಬಹುದೇ ಎಂದು ಕಿಡಿಕಾರಿದ್ದಾರೆ. ಝಮೀರ್ ಮಾತಿಗೆ ಕೈಜೋಡಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಹಲವು ಪ್ರತಿಭಟನೆಗಳ ವೇಳೆ ಆರೆಸ್ಸೆಸ್ ಸಂವಿಧಾನಕ್ಕೆ ಗೌರವ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಆರೆಸ್ಸಸ್ಸನ್ನೇಕೆ ದೂಷಿಸುತ್ತೀರಿ ಎಂದ ಸ್ಪೀಕರ್ ಮಾತಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೆಸ್ಸೆಸ್ ಈ ದೇಶದಲ್ಲಿ ಮನುವಾದವನ್ನು ಹೇರುತ್ತಿದೆ ಎಂದು ಕಿಡಿಕಾರಿದರು. ಇದರ ಬೆನ್ನಲ್ಲೇ ಮಾತಿಗಿಳಿದ ಸಚಿವ ಆರ್ ಅಶೋಕ್ ಮುಂದೊಂದು ದಿನ ಎಲ್ಲರೂ ನಮ್ಮ ಆರೆಸ್ಸೆಸ್ ಎಂದು ಹೇಳುವ ಕಾಲ ಬರಲಿದೆ ಎಂದರು

ಚರ್ಚೆ ಹೆಚ್ಚಾದಂತೆ ಎಚ್ಚೆತ್ತ ಸ್ಪೀಕರ್ ಈ ವಿಷಯ ಇಲ್ಲಿಗೆ ನಿಲ್ಲಿಸೋಣ ಎಂದು ಸದನವನ್ನು ಮುಂದೂಡಿದರು

Join Whatsapp
Exit mobile version