ಜೈಲು ತೋರಿಸಿದ ತಕ್ಷಣ ನಮ್ಮ ಕೈ ಕಾಲು ನಡುಗುವುದಿಲ್ಲ: ಸರಕಾರಕ್ಕೆ ಕೋಡಿಹಳ್ಳಿ ಸ್ಪಷ್ಟನೆ

Prasthutha|

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ (ಎ.7) ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಸಂಬಂಧ ನಾಳಿನ ಮುಷ್ಕರ ಬಗ್ಗೆ ಪ್ರತಿಕ್ರಿಯಿಸಿರುವ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸರಕಾರ ನಮಗೆ ಜೈಲು ತೋರಿಸಿದ ತಕ್ಷಣ ನಮ್ಮ ಕೈ ಕಾಲು ನಡುಗುವುದಿಲ್ಲ ಎಂದು ಸರಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.

ಕೋಡಿಹಳ್ಳಿ ಪ್ರಚೋದನಕಾರಿ ಹೇಳಿಕೆ ನೀಡಿದರೆ ಅವರನ್ನು ಜೈಲಿಗೆ ಹಾಕಲು ಸಿದ್ದ ಎಂಬ ಆದೇಶದ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೋಡಿಹಳ್ಳಿ ಚಂದ್ರಶೇಖರ್, ನನಗೇನು ಇದು ನಾಚಿಕೆ ಅಂತನೂ ಅನಿಸುವುದಿಲ್ಲ. ಮುಜುಗರನೂ ಆಗುವುದಿಲ್ಲ. ಅವರು ಜೈಲು ತೋರಿಸಿದ ತಕ್ಷಣ ನಮ್ಮ ಕೈ ಕಾಲು ನಡುಗುವುದಿಲ್ಲ. ನಾನು ಜೈಲಿಗೆ ನೂರಾರು ಬಾರಿ ಹೋಗಿ ಬಂದಿದ್ದೇನೆ. ಅವರು ಇನ್ನೂ ಒಂದು ಸಲ ಪ್ರೀತಿಯಿಂದ ಕಳುಹಿಸುವುದಾದರೆ ಜೈಲಿಗೆ ಹೋಗಲು ತಯಾರಿದ್ದೇನೆ ಎಂದು ಹೇಳಿದ್ದಾರೆ.

- Advertisement -