Home ಟಾಪ್ ಸುದ್ದಿಗಳು ಅದಿರು ಸಾಗಾಟ ಪ್ರಕರಣ: 6 ಕೇಸ್​ನಲ್ಲೂ ಕಾಂಗ್ರೆಸ್​ ಶಾಸಕ ಸತೀಶ್ ಸೈಲ್‌ ದೋಷಿ..!

ಅದಿರು ಸಾಗಾಟ ಪ್ರಕರಣ: 6 ಕೇಸ್​ನಲ್ಲೂ ಕಾಂಗ್ರೆಸ್​ ಶಾಸಕ ಸತೀಶ್ ಸೈಲ್‌ ದೋಷಿ..!

ಕಾರವಾರ: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ.

ಬರೋಬ್ಬರಿ 6 ಕೇಸ್‌ಗಳಲ್ಲೂ ಸಹ ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ದೋಷಿ ಎಂದು ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದಾರೆ. ಅಲ್ಲದೇ ಎಲ್ಲಾ ಅಪರಾಧಿಗಳನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿ , ಶಿಕ್ಷೆ ಪ್ರಮಾಣವನ್ನೂ ನಾಳೆಗೆ (ಅಕ್ಟೋಬರ್ 25) ಕಾಯ್ದಿರಿಸಿದ್ದಾರೆ.

ಸೀಜ್ ಆಗಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ಅಪರಾಧಿಗಳಾದ ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಹಾಗೂ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ಸೈಲ್ ಸೇರಿದಂತೆ ಮೂವರ ಅಪರಾಧಿಗಳಿಗೆ ನಾಳೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದು, ಏನು ಶಿಕ್ಷೆ ಕೊಡಬಹುದು ಎಂದು ಅಪರಾಧಿಗಳಿಗೆ ಆತಂಕ ಶುರುವಾಗಿದೆ.

Join Whatsapp
Exit mobile version