ದರ್ರಾಂಗ್ ಪೊಲೀಸ್ ಶೂಟೌಟ್ ಪ್ರಕರಣ । ಸಿಬಿಐ ತನಿಖೆಗೆ ಆದೇಶಿಸಿದ ಅಸ್ಸಾಂ ಮುಖ್ಯಮಂತ್ರಿ

Prasthutha|

ಗುವಾಹಟಿ: ಅಸ್ಸಾಂ ಪೊಲೀಸರು ನಡೆಸಿದ ಶೂಟೌಟ್ ನಲ್ಲಿ ಇಬ್ಬರು ಮುಸ್ಲಿಮರು ಮೃತ ಪಟ್ಟಿದ್ದು, ಅಸ್ಸಾಂ ಸರ್ಕಾರ ಈ ಪ್ರಕರಣವನ್ನು ಕೇಂದ್ರ ತನಿಖಾ ತಂಡ (ಸಿಬಿಐ) ಕ್ಕೆ ವಹಿಸಿ ಆದೇಶ ನೀಡಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಶ್ವಾ ಶರ್ಮಾ ಇಂದು ಸುದ್ದಿಗಾರರಿಗೆ ತಿಳಿಸಿದರು.

- Advertisement -

ಗುರುವಾರ ನಡೆದ ಬೆಳವಣಿಗೆಯೊಂದರಲ್ಲಿ ಸುಮಾರು 800 ಕುಟುಂಬಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಮಧ್ಯೆ ನಿರಾಯುಧವಾಗಿದ್ದ ಅಸ್ಸಾಮ್ ಜನತೆಯ ಮೇಲೆ ಪೊಲೀಸರು ಯದ್ವಾತದ್ವಾ ಗುಂಡು ಹಾರಿಸಿದಾಗ ಇಬ್ಬರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ರಾಷ್ಟ್ರಾದ್ಯಂತ ಭಾರೀ ಪ್ರತಿಭಟನೆ ಮತ್ತು ಜನಾಕ್ರೋಶ ಪ್ರಕಟವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಈ ಹಿಂದೆ ನಡೆದ ಬೆಳವಣಿಗೆಯಲ್ಲಿ ಅಸ್ಸಾಂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದೆಂದು ಘೋಷಿಸಿದ್ದರು.

- Advertisement -

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ್ ಬಿಶ್ವಾ ಶರ್ಮಾ, ಅಸ್ಸಾಂ ಘಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐ ವಹಿಸಲಾಗಿದೆ ಎಂದು ತಿಳಿಸಿದರು.

Join Whatsapp