Home ಟಾಪ್ ಸುದ್ದಿಗಳು ಪ್ರಧಾನಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಪ್ರಾಂಶುಪಾಲರಿಗೆ ನೀಡಿದ ಆದೇಶ ಸಂವಿಧಾನ ವಿರೋಧಿ: ಸೂರ್ಯ ಮುಕುಂದರಾಜ್

ಪ್ರಧಾನಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಪ್ರಾಂಶುಪಾಲರಿಗೆ ನೀಡಿದ ಆದೇಶ ಸಂವಿಧಾನ ವಿರೋಧಿ: ಸೂರ್ಯ ಮುಕುಂದರಾಜ್

ಬೆಂಗಳೂರು: ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವಂತೆ ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸುತ್ತೋಲೆಯ ಮೂಲಕ ಆದೇಶ ನೀಡಿರುವುದು ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದ್’ರಾಜ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇದೆಂತಹ ಆದೇಶ? ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರಿಗೆ ಮೋದಿಯ ಕೆಟ್ಟ ಭಾಷಣಕ್ಕೆ ಜನ ಕರೆದುಕೊಂಡು ಬರುವ ಮೇಸ್ತ್ರಿ ಕೆಲಸ ಕೊಟ್ಟಿದ್ದಾರೆ. ಕಡೇ ಸಾಲು ನೋಡಿ ‘ತಪ್ಪಿದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ಸಂಬಂಧಪಟ್ಟ ಪ್ರಾಂಶುಪಾಲರೇ ಜವಾಬ್ದಾರರಾಗಬೇಕಾಗುತ್ತದೆ’ ಎಂದು ಉಪ ನಿರ್ದೇಶಕರು ಫತ್ವಾ ಹೊರಡಿಸಿದ್ದಾರೆ.ಇಂತಹ ಕಟ್ಟಾಜ್ಞೆ ಸಂವಿಧಾನ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version