ಸಂಸತ್ತಿನ ಭದ್ರತಾ ಲೋಪದ ಆರೋಪಿಗಳಿಗೆ ವಿಪಕ್ಷಗಳ ಬೆಂಬಲ: ಪ್ರಧಾನಿ ಆರೋಪ

Prasthutha|

ನವದೆಹಲಿ: ಸಂಸತ್ತಿನ ಭದ್ರತಾ ಲೋಪದ ಆರೋಪಿಗಳಿಗೆ ವಿರೋಧ ಪಕ್ಷಗಳ ಬೆಂಬಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

- Advertisement -

ಬಿಜೆಪಿ ಸಂಸದೀಯ ಮಂಡಳಿ ಸಭೆಯು ಇಂದು ಸಂಸತ್ತಿನ ಗ್ರಂಥಾಲಯ ಆವರಣದಲ್ಲಿ ನಡೆದಿದ್ದು, ಇದರಲ್ಲಿ‌ ಮಾತನಾಡಿದ ಪ್ರಧಾನಿ ಈ ಆರೋಪ ಮಾಡಿದ್ದಾರೆ.

ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಎಲ್ಲಾ ಸಂಸದರು ಭಾಗವಹಿಸಿದ್ದರು.

- Advertisement -

ವಿರೋಧ ಪಕ್ಷದ ಸಂಸದರನ್ನು ಬೆಂಬಲಿಸುವುದು ಕಳ್ಳತನದಷ್ಟೇ ಅಪಾಯಕಾರಿ. ಸಂಸತ್ತಿನ ಭದ್ರತೆ ಉಲ್ಲಂಘನೆ ವಿಚಾರದಲ್ಲಿ ವಿಪಕ್ಷಗಳ ನಿಲುವು ಸರಿಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರತಿಪಕ್ಷಗಳ ವರ್ತನೆ ಬೇಸರ ತಂದಿದೆ. ಒಳ್ಳೆಯ ಮತ್ತು ಸಕಾರಾತ್ಮಕ ಕೆಲಸ ಮಾಡುವ ಉದ್ದೇಶ ಕೆಲವರಿಗೆ ಇರುವುದಿಲ್ಲ. ಋಣಾತ್ಮಕ ರಾಜಕಾರಣ ಮಾಡುತ್ತಿರುವ ವಿಧಾನದಿಂದ 2024ರಲ್ಲೂ ವಿರೋಧ ಪಕ್ಷಗಳು ದೂರ ಉಳಿಯಲಿವೆ ಎಂದು ಪ್ರಧಾನಿ ಹೇಳಿದ್ದಾರೆ. ವಿರೋಧ ಪಕ್ಷಗಳು ಸಿಟ್ಟು, ಹತಾಶೆಯಿಂದ ದೊಡ್ಡ ತಪ್ಪು ಮಾಡುತ್ತಿವೆ ಎಂದ ಅವರು, ಬಿಜೆಪಿಯನ್ನು ಕಿತ್ತೊಗೆಯುವ ಹೆಸರಿನಲ್ಲಿ ಕೆಲ ಹಿರಿಯ ನಾಯಕರೂ ಸಕ್ರಿಯರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.



Join Whatsapp