Home ರಾಜ್ಯ ಸದಾಶಿವ ಆಯೋಗ ವರದಿ ಜಾರಿಗೆ ವಿರೋಧಕ್ಕೆ ಆಕ್ಷೇಪ; ನಾಳೆಯಿಂದ ಮಾದಿಗ ಜಾತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಸದಾಶಿವ ಆಯೋಗ ವರದಿ ಜಾರಿಗೆ ವಿರೋಧಕ್ಕೆ ಆಕ್ಷೇಪ; ನಾಳೆಯಿಂದ ಮಾದಿಗ ಜಾತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಬೆಂಗಳೂರು: ಸದಾಶಿವ ಆಯೋಗ ವರದಿ ಜಾರಿ ಕುರಿತು ಕೊರಮ, ಕೊರಚ, ಕೊರವ ಬೋವಿ, ಲಂಬಾಣಿ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸಬಾರದು ಎಂದು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಬಿ. ನರಸಪ್ಪ ದಂಡೋರ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡುವುದು ಸೂಕ್ತವಾಗಿದೆ. ಸದಾಶಿವ ಆಯೋಗ ಜಾರಿಯಿಂದ ಇರುವ 101 ಜಾತಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ಆದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿನದಾಗಿ ಅನುಭವಿಸುವವರು ಈ ರೀತಿ ವಿರೋಧ ನಡೆಸುತ್ತಿರುವುದು ಸರಿಯಲ್ಲ ಎಂದರು.

ಸದಾಶಿವ ಆಯೋಗ ವರದಿಯ ಅನುಷ್ಠಾನದ ವಿಚಾರದಲ್ಲಿ ಸರ್ಕಾರಗಳು ಮಾದಿಗ ಜನಾಂಗವನ್ನು ಮೋಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವೈಖರಿಯನ್ನು ಖಂಡಿಸಿ ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಲು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಾಳೆ ಮತ್ತು ನಾಡಿದ್ದು ಜಾತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಮಾದಿಗ ದಂಡೋರದ ಎಲ್ಲ ರಾಜ್ಯಗಳ ಘಟಕದ ಪದಾಧಿಕಾರಿಗಳು, ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Join Whatsapp
Exit mobile version