ನವದೆಹಲಿ, ಆ.3: ಪೆಟ್ರೋಲ್ ದರ ಏರಿಕೆ ಮತ್ತು ಪೆಗಾಸಸ್ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿರುವ ವಿರೋಧ ಪಕ್ಷಗಳ ಸದಸ್ಯರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾರ್ಲಿಮೆಂಟ್ ಗೆ ಸೈಕಲ್ ನಲ್ಲಿ ತೆರಳಿ ಪ್ರತಿಭಟನೆ ನಡೆಸಿದರು.
ಸಂಸತ್ ನ ಉಭಯ ಸದನಗಳ 17 ಪಕ್ಷಗಳ ವಿರೋಧ ಪಕ್ಷದ ನಾಯಕರ ಉಪಹಾರ ಸಭೆ ಮಂಗಳವಾರ ನವದೆಹಲಿಯ ಕಾನ್ಸ್ಟಿ ಟ್ಯೂಷನ್ ಕ್ಲಬ್‌ನಲ್ಲಿ ನಡೆಯಿತು. ಸಭೆಯಲ್ಲಿ, ನಾಯಕರು ಸಂಸತ್ತಿನಲ್ಲಿ ಸದ್ಯದ ಬಿಕ್ಕಟ್ಟನ್ನು ನಿವಾರಿಸಲು ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿದೆ. ಕೆಲವು ಪಕ್ಷಗಳು ಸಂಸತ್ತಿನ ಆವರಣದ ಹೊರಗೆ ಅಣಕು ಅಧಿವೇಶನ ನಡೆಸಲು ಪ್ರಸ್ತಾಪಿಸಿವೆ.
ಸಭೆಯ ಬಳಿಕ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ನಾಯಕರು ಸೈಕಲ್ ನಲ್ಲಿ ಸಂಸತ್ ಭವನಕ್ಕೆ ತೆರಳಿದರು.