Home ಟಾಪ್ ಸುದ್ದಿಗಳು ಕೇರಳ । ‘ಆರೆಸ್ಸೆಸ್ ಗವರ್ನರ್ ಗೋ ಬ್ಯಾಕ್’ ಘೋಷಣೆ ಕೂಗಿದ ಕಾಂಗ್ರೆಸ್ ಶಾಸಕರು

ಕೇರಳ । ‘ಆರೆಸ್ಸೆಸ್ ಗವರ್ನರ್ ಗೋ ಬ್ಯಾಕ್’ ಘೋಷಣೆ ಕೂಗಿದ ಕಾಂಗ್ರೆಸ್ ಶಾಸಕರು

ಕೊಚ್ಚಿನ್: ಕೇರಳ ವಿಧಾನಸಭೆಯ ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ಸದನವನ್ನುದ್ದೇಸಿ ಮಾತನಾಡಲು ಆಗಮಿಸಿದ ಗವರ್ನರ್ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷ ‘ಆರೆಸ್ಸೆಸ್ ಗವರ್ನರ್ ಗೋ ಬ್ಯಾಕ್’ ಎಂಬ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

ವಿರೋಧ ಪಕ್ಷದ ಶಾಸಕರು ಕಲಾಪವನ್ನು ಬಹಿಷ್ಕರಿಸಿದ ಬಳಿಕ ಸದನದಲ್ಲೇ ಧರಣಿ ನಡೆಸಿದರು.

ರಾಜ್ಯಪಾಲರ ಭಾಷಣ ಆರಂಭವಾಗುತ್ತಿದ್ದಂತೆ ವಿರೋಧಪಕ್ಷಗಳ ಶಾಸಕರು ಆರೆಸ್ಸೆಸ್ ಗವರ್ನರ್ ಗೋ ಬ್ಯಾಕ್ ಘೋಷಣೆ ಕೂಗಿ ಗಮನ ಸೆಳೆದರು.

ഗവർണറെ പ്രതിപക്ഷം എതിരേറ്റത് ആർ.എസ്.എസ് ഗവർണർ ഗോ ബാക്ക് മുദ്രാവാക്യം വിളിച്ച് | Mathrubhumi News

ವಿರೋಧ ಪಕ್ಷದ ನಡೆಯಿಂದ ಕೆರಳಿದ ಗವರ್ನರ್ ಆರೀಫ್ ಖಾನ್, ಇದು ಪ್ರತಿಭಟನೆಗೆ ಸೂಕ್ತ ಸ್ಥಳವಲ್ಲ ಎಂದು ಆಕ್ರೋಶಿತವಾಗಿ ಉತ್ತರಿಸಿದರು. ಈ ಸಂದರ್ಭದಲ್ಲಿ ಶಾಸಕರು ಕಲಾಪ ಬಹಿಷ್ಕರಿಸಿ ಧರಣಿ ನಡೆಸಿದರೂ ಕೂಡ ರಾಜ್ಯಪಾಲರು ತನ್ನ ಭಾಷಣವನ್ನು ಮುಂದುವರಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲರನ್ನು ರಕ್ಷಿಸಲು ಲೋಕಾಯುಕ್ತ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ ಮತ್ತು ರಾಜ್ಯಪಾಲರೊಂದಿಗೆ ಅಪವಿತ್ರ ಸಂಬಂಧ ಹೊಂದಿದ್ದಾರೆ ಎಂಬ ಫಲಕಗಳನ್ನು ಕೂಡ ಹಿಡಿದಿದ್ದರು.

ಈ ಮಧ್ಯೆ ರಾಜ್ಯಪಾಲರು ರಾಜ್ಯ ಸರ್ಕಾರದೊಂದಿಗೆ ಶಾಮೀಲಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸದನದ ಹೊರಗೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಕೇರಳ ರಾಜ್ಯಪಾಲರು ಸಂಘಪರಿವಾರ ಮತ್ತು ಬಿಜೆಪಿಯ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂದು ಸತೀಶನ್ ಆರೋಪಿಸಿದ್ದಾರೆ.

Join Whatsapp
Exit mobile version