ಆಪರೇಷನ್ ಸಿಂಧೂರ್: 8 ಮಂದಿ ಸಾವು, ಪಾಕಿಸ್ತಾನ ಮಾಹಿತಿ

- Advertisement -

ನವದೆಹಲಿ: ಭಾರತವು ಪಾಕಿಸ್ತಾನದ 9 ಸ್ಥಳಗಳಲ್ಲಿ ದಾಳಿ ನಡೆಸಿದ್ದು, 24 ಸ್ಥಳಗಳ ಮೇಲೆ ಪರಿಣಾಮ ಬೀರಿದೆ ಎಂದು ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

- Advertisement -

ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 22 ಜನರು ಗಾಯಗೊಂಡಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ.

ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

- Advertisement -

ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಪಾಕಿಸ್ತಾನದಲ್ಲಿ ಉಗ್ರರ 9 ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆದಿದೆ, ನಮ್ಮ ಸೇನೆ ಉಗ್ರರ ಮೂಲಸೌಲಭ್ಯಗಳನ್ನು ನೆಲಸಮ ಮಾಡುವಲ್ಲಿ ಯಶಸ್ವಿಯಾಗಿದೆ. ಆದ್ರೆ ಯಾವುದೇ ನಾಗರಿಕ ಸ್ಥಳಗಳು, ಆರ್ಥಿಕ ಕಟ್ಟಡಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿಲ್ಲವೆಂದು ಸ್ಪಷ್ಟಪಡಿಸಿದೆ.

- Advertisement -


Must Read

Related Articles