ಬೆಂಗಳೂರು : ಆಪರೇಷನ್ ಕಮಲದ ಪರಿಸ್ಥಿತಿ ಉದ್ಭವಿಸುವುದಿಲ್ಲ. ಬಿಜೆಪಿ 120 ರಿಂದ 125 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷವು ಎಕ್ಸಿಟ್ ಪೋಲ್ ಗಳನ್ನು ತಪ್ಪೆಂದು ಸಾಬೀತುಪಡಿಸುತ್ತದೆ, ಅವುಗಳಲ್ಲಿ ಹೆಚ್ಚಿನವು ಕಾಂಗ್ರೆಸ್ ಗೆ ಬಿಜೆಪಿಗಿಂತ ಹೆಚ್ಚಿನ ಸ್ಥಾನವನ್ನು ನೀಡಿವೆ. ಯಾವುದೇ ರೀತಿಯ ‘ಆಪರೇಷನ್ ಕಮಲ’ದ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಬಾರಿ ರಾಜ್ಯದ ಜನತೆ ರಾಜ್ಯದ ಅಭಿವೃದ್ಧಿಗೆ ಮತ ನೀಡಿ ಬಹುಮತದ ಸರಕಾರ ನೀಡಲಿದ್ದಾರೆ.