ಮಂಗಳೂರು: 2023 ಜನವರಿ ತಿಂಗಳ 6,7,08 (ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ)ರಂದು ಹಾವೇರಿಯಲ್ಲಿ ಬಹು ನಿರೀಕ್ಷಿತ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದೆ. ಮೂರು ದಿನಗಳ ಸಮ್ಮೇಳನವು ನಾಡುನುಡಿ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.
ಈ ಸಮ್ಮೇಳನಕ್ಕೆ ನೋಂದಣಿ ಮಾಡುವ ಪ್ರಕ್ರಿಯೆ ಈಗಾಗಲೆ ಆರಂಭವಾಗಿದ್ದು, ದಿನಾಂಕ 25-12-2022 ರವರೆಗೆ ನಡೆಯಲಿದೆ. ಈ ಸಂಬಂಧವಾಗಿ ಆನ್’ಲೈನ್ ನೋಂದಣಿಯನ್ನು ಮಾಡುವ ಬಗ್ಗೆ ವಿವರವನ್ನು ಮಾಧ್ಯಮಗಳಲ್ಲಿ ನೀಡಲಾಗಿದ್ದು, ಈಗಾಗಲೇ ವಿಶೇಷವಾಗಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಹಳಷ್ಟು ಮಂದಿ ಸಾಹಿತ್ಯ ಪರಿಷತ್ತಿನ ಸದಸ್ಯರು ನೋಂದಣಿಯನ್ನು ಮಾಡಿರುತ್ತಾರೆ.
ಇದೀಗ ಕೇಂದ್ರ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಂತೆ ಸಮ್ಮೇಳನಕ್ಕೆ ಎಲ್ಲರೂ ಮುಕ್ತವಾಗಿ (ಸಾರ್ವಜನಿಕವಾಗಿ) ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ದ. ಕ. ಜಿಲ್ಲೆಯಿಂದ ಅತಿ ಹೆಚ್ಚು ನೋಂದಣಿ ಮಾಡಿಕೊಳ್ಳುವಂತೆ ಈ ಮೂಲಕ ಕೋರಲಾಗಿದೆ.
ರೂ. 500 ನೀಡಿ ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ಮೂರು ದಿನಗಳ ಊಟ, ವಸತಿ ಮತ್ತು ಆಕರ್ಷಕ ಕಿಟ್ ವ್ಯವಸ್ಥೆ ಮಾಡಿರುತ್ತಾರೆ.
ದಿನಾಂಕ ದಶಂಬರ 25ರ ಅಂತಿಮ ದಿನದೊಳಗೆ ಸಮ್ಮೇಳನಕ್ಕೆ ನೋಂದಣಿಯನ್ನು ಮಾಡಿಕೊಳ್ಳುವ ಮೂಲಕ ನಾಡುನುಡಿಯ ಸೇವೆಯಲ್ಲಿ ಮತ್ತು ಕನ್ನಡ ಸಾಹಿತ್ಯ ಸಂಸ್ಕೃತಿ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅಪೂರ್ವ ಅವಕಾಶವನ್ನು ಪಡಕೊಳ್ಳಬೇಕಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥರು ಪ್ರಕಟಣೆಯಲ್ಲಿ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಸಂಪರ್ಕಿಸಿ: 9448558583