Home ಟಾಪ್ ಸುದ್ದಿಗಳು ಯುವ ಕಾಂಗ್ರೆಸ್ ಆಯೋಜಿಸಿದ್ದ ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಯುವ ಕಾಂಗ್ರೆಸ್ ಆಯೋಜಿಸಿದ್ದ ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಸಮಾರೋಪ ಸಮಾರಂಭದಲ್ಲಿ ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ, ಅಂಡಮಾನ್ ನಿಕೋಬಾರ್ ಅಧ್ಯಕ್ಷ ಎ ಇಳಯರಾಜಾ ಅಲ್ಸು ಭಾಗಿ

ಬೆಂಗಳೂರು: ಉಕ್ಕಿನ ಮಹಿಳೆ, ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ ಇಂದು ಸಂಪನ್ನಗೊಂಡಿದೆ.

ನಗರದ ರೇಸ್ ಕೋರ್ಸ್ ರಸ್ತೆಯ ಆನಂದರಾವ್ ವೃತ್ತದ ಕಾಂಗ್ರೆಸ್ ಭವವನದಲ್ಲಿ ನವೆಂಬರ್ 30 ರಿಂದ ನಡೆಯುತ್ತಿದ್ದ ಛಾಯಾಚಿತ್ರ ಪ್ರದರ್ಶನದ ಸಮಾರೋಪ ಕಾರ್ಯಕ್ರಮದಲ್ಲಿ ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಪಾಲ್ಗೊಂಡು, ರಾಷ್ಟ್ರ ನಿರ್ಮಾಣದಲ್ಲಿ ಇಂದಿರಾಗಾಂಧಿ ಅವರ ಕೊಡುಗೆಯನ್ನು ಸ್ಮರಿಸಿದರು.

ಛಾಯಾ ಚಿತ್ರ ಪ್ರದರ್ಶನವನ್ನು ಅಂಡಮಾನ್ ನಿಕೋಬಾರ್ ದ್ವೀಪದ ಯುವ ಕಾಂಗ್ರೆಸ್ ಅಧ್ಯಕ್ಷ ಎ ಇಳಯರಾಜಾ ಅಲ್ಸು, ಮಾಜಿ ಅಧ್ಯಕ್ಷ ಜಾನ್ ರೊಬರ್ಟ್, ಉಪಾಧ್ಯಕ್ಷ ನಜೀಬ್ ಸಿದ್ದಕ್, ರಾಜ್ಯ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಸ್ತುವಾರಿ ಪ್ರಮೋದ್ ವಾಯ್ ಅವರಿಗೆ ರಕ್ಷಾ ರಾಮಯ್ಯ ಛಾಯಾಚಿತ್ರ ಪ್ರದರ್ಶನದ ವೈಶಿಷ್ಟ್ಯ ಕುರಿತು ಮಾಹಿತಿ ನೀಡಿದರು.

ಛಾಯಾಚಿತ್ರ ಪ್ರದರ್ಶನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರು ನವೆಂಬರ್ 30 ರಂದು ಉದ್ಘಾಟಿಸಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯ, ಕಿರಿಯ ಕಾಂಗ್ರೆಸ್ ಮುಖಂಡರು ಛಾಯಾಚಿತ್ರ ವೀಕ್ಷಿಸಿದರು.

Join Whatsapp
Exit mobile version