Home ಟಾಪ್ ಸುದ್ದಿಗಳು 5 ವರ್ಷ ಸಿಎಂ ಆಗಿ ಮುಂದುವರಿಯೋ ವಿಚಾರ ಗೊತ್ತಿರೋದು ಸಿದ್ದರಾಮಯ್ಯ, ಡಿಸಿಎಂಗೆ ಮಾತ್ರ: ಪರಮೇಶ್ವರ್

5 ವರ್ಷ ಸಿಎಂ ಆಗಿ ಮುಂದುವರಿಯೋ ವಿಚಾರ ಗೊತ್ತಿರೋದು ಸಿದ್ದರಾಮಯ್ಯ, ಡಿಸಿಎಂಗೆ ಮಾತ್ರ: ಪರಮೇಶ್ವರ್

ಬೆಂಗಳೂರು: 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರ ಗೊತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾತ್ರ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಆಗಿ 5 ವರ್ಷ ನಾನೇ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಯಾರಿಗೂ ಗೊತ್ತಿಲ್ಲ ದೆಹಲಿಯಲ್ಲಿ ಸರ್ಕಾರ ರಚನೆ ಯಾದಾಗ ಏನೂ ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ಅದು ಗೊತ್ತಿರೋದು ಸಿಎಂ ಹಾಗೂ ಡಿಸಿಎಂಗೆ ಮಾತ್ರ. ಅವರಿಗೆ ಮಾತ್ರ ಎಲ್ಲ ಗೊತ್ತಿರೋದು. ಆ ವಿಚಾರದಲ್ಲಿ ನಾವು ಹೇಳಿಕೆ ಕೊಡೋಕೆ ಸರಿ ಕಾಣಿಸಲ್ಲ. ಈ ಸಂದರ್ಭದಲ್ಲಿ ಪ್ರಧಾನಕಾರ್ಯದರ್ಶಿಗಳು ಬಂದು ಹೋಗಿದ್ದಾರೆ. ಬಹುಶಃ ಅವರಿಗೆ ಗೊತ್ತಿರುತ್ತೆ ಎಂದರು.

ಯಾವುದು ಸತ್ಯ ಯಾವುದು ಅಸತ್ಯ ಅಂತಾ ನಾನು ಜಡ್ಜ್ ಮಾಡೊಕ್ಕೆ ಆಗುತ್ತಾ?. ಅವರು ಹೇಳಿದ್ದಾರೆ ಏನೋ ಅರ್ಥ ಇರಬೇಕು. ನಾನು ವೈಯಕ್ತಿಕವಾಗಿ ಜಡ್ಜ್ಮೆಂಟ್ ಮಾಡೋಕ್ಕೆ ಆಗಲ್ಲ ಎಂದರು.

Join Whatsapp
Exit mobile version