Home ಟಾಪ್ ಸುದ್ದಿಗಳು ಅಸ್ಸಾಮ್ NRC ಯಲ್ಲಿ ಕೇವಲ 1032 ಅನುಮಾನಾಸ್ಪದ ಪ್ರಕರಣ: RTI ಗೆ ಉತ್ತರ ನೀಡಿದ ಸಮಿತಿ

ಅಸ್ಸಾಮ್ NRC ಯಲ್ಲಿ ಕೇವಲ 1032 ಅನುಮಾನಾಸ್ಪದ ಪ್ರಕರಣ: RTI ಗೆ ಉತ್ತರ ನೀಡಿದ ಸಮಿತಿ

ಗುವಾಹಟಿ: ಅಸ್ಸಾಮ್ ನ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್.ಆರ್.ಸಿ) ಯಲ್ಲಿ ಅಂತಿಮ ಕರಡು ಪ್ರತಿಯಲ್ಲಿ ಕೇವಲ 1032 ಅನುಮಾನಾಸ್ಪದ ಪ್ರಕರಣ ಪತ್ತೆಯಾಗಿದೆ ಎಂದು ಎನ್.ಆರ್.ಸಿ ರಾಜ್ಯ ಸಂಯೋಜಕ ಸಮಿತಿ ಬಹಿರಂಗಪಡಿಸಿದೆ. ಮಾತ್ರವಲ್ಲ ಅನುಮಾನಾಸ್ಪದ ಪ್ರಕರಣಗಳ ಬಗ್ಗೆ ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಅದು ತಿಳಿಸಿದೆ.

ಸದ್ಯ ಅಸ್ಸಾಮ್ ನಲ್ಲಿ 3.29 ಕೋಟಿ ಅರ್ಜಿದಾರರ ಪೈಕಿ 19 ಲಕ್ಷಕ್ಕೂ ಅಧಿಕ ಜನರನ್ನು ಆಗಸ್ಟ್ 31, 2019 ರಂದು ಪ್ರಕಟಿಸಲಾದ ಅಂತಿಮ ಕರಡು ನೋಂದಣಿ ಪಟ್ಟಿಯಿಂದ ಹೊರಗಿಡಲಾಗಿತ್ತು.

ಪ್ರಸಕ್ತ 1,220 ಕೋಟಿ ರೂಪಾಯಿ ಖರ್ಚು ಮಾಡಿ ರಚಿಸಿದ ಎನ್.ಆರ್. ಸಿ ಕರಡು ಪ್ರತಿಯಲ್ಲಿ ಕೇವಲ 1032 ಮಂದಿ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ.

Join Whatsapp
Exit mobile version