ನವದೆಹಲಿ: ಬಾಬರಿ ಮಸ್ಜಿದ್ ಅನ್ಯಾಯದ ಬಲಿಪಶು ಎಂಬ ಆನ್ ಲೈನ್ ಕಾನ್ಫರೆನ್ಸ್ ಅನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು (ಮಂಗಳವಾರ) ಸಂಜೆ 6.30ಕ್ಕೆ ಹಮ್ಮಿಕೊಂಡಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಒಎಂಎ ಸಲಾಂ ಆನ್ ಲೈನ್ ಸಮಾವೇಶ ಉದ್ಘಾಟಿಸಲಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯ ಮೌಲಾನಾ ಉಬೈದುಲ್ಲಾ ಖಾನ್ ಅಝ್ಮಿ,ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಸದಸ್ಯೆ ಡಾ.ಅಸ್ಮಾ ಝಹ್ರಾ ತಯ್ಯಿಬಾ, ಸಂಸದ ತೋಲ್ ತಿರುಮಾವಲನ್, ಕರ್ನಾಟಕ ಹೈಕೋರ್ಟ್ ನ ಹಿರಿಯ ಅಡ್ವೊಕೇಟ್ ಎಸ್.ಬಾಲನ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಅಧ್ಯಕ್ಷ ಮೌಲಾನಾ ಮುಹಮ್ಮದ್ ಅಹ್ಮದ್ ಬೇಗ್ ನದ್ವಿ, ಹೋರಾಟಗಾರ್ತಿ ಹಾಗೂ ಲೇಖಕಿ ಡಾ.ಮೀನಾ ಕಂಡಸಮಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಭಾಷಣ ಮಾಡಲಿದ್ದಾರೆ. ಈ ಸಮಾವೇಶವನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Link to watch on Facebook: https://fb.me/e/1dvDIe9k9
Link to watch on YouTube: https://youtube.com/watch?v=fItk7lwxzlg