Home ಕ್ರೀಡೆ ಟೋಕಿಯೋ ಒಲಿಂಪಿಕ್ಸ್ ಬಾಕ್ಸಿಂಗ್ : ಪದಕ ಖಚಿತವಾಗಲು ಒಂದೇ ಗೆಲುವು ಬಾಕಿ !

ಟೋಕಿಯೋ ಒಲಿಂಪಿಕ್ಸ್ ಬಾಕ್ಸಿಂಗ್ : ಪದಕ ಖಚಿತವಾಗಲು ಒಂದೇ ಗೆಲುವು ಬಾಕಿ !

ಟೋಕಿಯೋ(ಜು.28): ಭಾರತದ ಮಹಿಳಾ ಬಾಕ್ಸರ್ ಪೂಜಾ ರಾಣಿ ಮಿಡ್‌ ವೇಟ್‌ ವಿಭಾಗದ ಪ್ರೀಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಅಲ್ಜೇರಿಯಾದ ಇಂಚಾರ್ಕ್‌ ಚೈಬ್ ಎದುರು 5-0 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪೂಜಾ ರಾಣಿ ಇನ್ನೊಂದು ಪಂದ್ಯ ಜಯಿಸಿದರೆ, ಕನಿಷ್ಠ ಕಂಚಿನ ಪದಕ ಖಚಿತವಾಗಲಿದೆ.

ಪೂಜಾ ರಾಣಿ ಆರಂಭದ ಸುತ್ತಿನಿಂದಲೇ ಎದುರಾಳಿ ಬಾಕ್ಸರ್ ಎದುರು ಆಕ್ರಮಣಕಾರಿ ಆಟ ಪ್ರದರ್ಶನ ಮಾಡಿದರು. ಎದುರಾಳಿಗೆ ಕೌಂಟರ್ ಪಂಚ್ ನೀಡುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲೆರಡು ಸುತ್ತುಗಳಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ ಪೂಜಾ ರಾಣಿ ಮೂರನೇ ಸುತ್ತಿನಲ್ಲೂ ತಮ್ಮ ಪಟ್ಟು ಸಡಿಲಿಸಲಿಲ್ಲ. ಕೊನೆಯ ಹಾಗೂ ಮೂರನೇ ಸುತ್ತಿನಲ್ಲಿ ಅಲ್ಜೇರಿಯಾದ ಇಂಚಾರ್ಕ್‌ ಚೈಬ್ ಆಕ್ರಮಣಕಾರಿ ಪಂಚ್ ನೀಡಲು ಮುಂದಾದರಾದರು, ಪೂಜಾ ರಾಣಿ ಮತ್ತೆ ಕೌಂಟರ್ ಪಂಚ್‌ ನೀಡುವ ಮೂಲಕ 5-0 ಅಂತರದಲ್ಲಿ ಸ್ಪಷ್ಟ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು.

ಇನ್ನು ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಚೀನಾದ ಕ್ಯು ಲೀ ಅವರನ್ನು ಎದುರಿಸಲಿದ್ದಾರೆ.
ಜುಲೈ 31ರಂದು ಮಧ್ಯಾಹ್ನ 3.30ರಿಂದ ಆರಂಭವಾಗಲಿರುವ ಕ್ವಾರ್ಟರ್ ಫೈನಲ್‌ನಲ್ಲಿ 2016ರ ರಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಕ್ಯು ಲೀ ಭಾರತದ ಪೂಜಾ ರಾಣಿಗೆ ಸವಾಲೊಡ್ಡಲಿದ್ದಾರೆ

Join Whatsapp
Exit mobile version