Home ಟಾಪ್ ಸುದ್ದಿಗಳು ಗುಂಡಿನ ಚಕಮಕಿ: ಛತ್ತೀಸಗಢದಲ್ಲಿ ಒಬ್ಬ ನಕ್ಸಲ್ ಹತ್ಯೆ

ಗುಂಡಿನ ಚಕಮಕಿ: ಛತ್ತೀಸಗಢದಲ್ಲಿ ಒಬ್ಬ ನಕ್ಸಲ್ ಹತ್ಯೆ

ರಾಯಪುರ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಗರ್ ಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ತುಮರ್ ಗಟ್ಟಾ ಹಾಗೂ ಸಿಂಗವರಂ ಗ್ರಾಮಗಳ ಸಮೀಪದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಶೋಧ ನಡೆಸಿದಾಗ ಗುಂಡಿನ ಚಕಮಕಿ ನಡೆದಿದೆ.


ನಕ್ಸಲರು ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.

Join Whatsapp
Exit mobile version